ಪಂಚರಾಜ್ಯಗಳ ಚುನಾವಣೆ ಅಂತ್ಯ: ಎಕ್ಸಿಟ್​ ಪೋಲ್​ನಿಂದ ಗರಿಗೆದರಿದ ಕುತೂಹಲ; ಎಲ್ಲಿ ಯಾರ ಅಧಿಕಾರ?

Exit Pol
Published on

ನವದೆಹಲಿ: ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್​, ಮಣಿಪುರ, ಗೋವಾ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಮುಕ್ತಾಯಗೊಂಡಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಮತಪ್ರಮಾಣದ ಸ್ಪಷ್ಟಚಿತ್ರಣ ಸಿಗುವ ಸಾಧ್ಯತೆ ಇದೆ.

ಈ ನಡುವೆಯೇ ಎಲ್ಲಿ ಯಾವ ಪಕ್ಷದವರು ಗೆಲ್ಲಲಿದ್ದಾರೆ, ಯಾರು ಅಧಿಕಾರ ಹಿಡಿಯಲಿದ್ದಾರೆ ಎಂಬ ಸುಳಿವು ನೀಡುವ ಚುನಾವಣೋತ್ತರ ಸಮೀಕ್ಷೆ ಮಾಹಿತಿ ಒಂದೊಂದಾಗಿ ಹೊರಬೀಳಲಾರಂಭಿಸಿದ್ದು, ರಾತ್ರಿಯೊಳಗೆ ಪೂರ್ಣಚಿತ್ರಣ ಸಿಗಲಿದೆ.

ಮತದಾನೋತ್ತರ ಸಮೀಕ್ಷೆ (ಎಕ್ಸಿಟ್​ ಪೋಲ್​) ಕುರಿತ ಪರಿಣತ ಏಜೆನ್ಸಿಗಳಾದ ಇಂಡಿಯಾ ಟುಡೇ ಆ್ಯಕ್ಸಿಸ್ ಮೈ ಇಂಡಿಯಾ, ಸಿ-ವೋಟರ್, ಟುಡೇಸ್ ಚಾಣಕ್ಯ, ಜನ್ ಕೀ ಬಾತ್​ ಮುಂತಾದವು ಈಗಾಗಲೇ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದು, ಇನ್ನು ಕೆಲವೇ ನಿಮಿಷಗಳಲ್ಲಿ ಬಹಳಷ್ಟು ಮಾಹಿತಿಯನ್ನು ರಾಜ್ಯವಾರು ಹಾಗೂ ಪಕ್ಷವಾರು ಹಂಚಿಕೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಜನರು ಕೂಡ ಮುಂದೇನು, ಎಲ್ಲಿ ಯಾರ ಅಧಿಕಾರ ಎಂಬ ಮಾಹಿತಿಯನ್ನು ಕೌತುಕದಿಂದ ಎದುರು ನೋಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net