

ಬೆಂಗಳೂರು: ಕರ್ನಾಟಕ ಮಾಹಿತಿ ಆಯೋಗವು ಮಾಹಿತಿ ಹಕ್ಕು ಕಾಯ್ದೆಯನ್ನು ಅನುಷ್ಟಾನಗೊಳಿಸಲು ವಿಫಲರಾಗಿರುವ ಅಧಿಕಾರಿಗಳ ಮೇಲೆ ದಂಡ ಪ್ರಯೋಗವನ್ನು ಮಾಡಿದೆ.
ಮೇ ಮತ್ತು ಜೂನ್ ತಿಂಗಳಲ್ಲಿ ಆಯೋಗದ ಪೀಠ-02ರಲ್ಲಿ 13 ಸಾರ್ವಜನಿಕ ಮಾಹಿತಿ ಅಧಿಕಾರಿಗಳಾದ ತಹಶೀಲ್ದಾರ್. ಸಹಾಯಕ ಕಾರ್ಯಪಾಲಕ ಅಭಿಯಂತರರು, ಇವರುಗಳಿಗೆ ತಲಾ ರೂ.25,000/-ಗಳನ್ನು ವಿಧಿಸಿ ಶಿಸ್ತುಕ್ರಮಕ್ಕೆ ಶೀಫಾರಸ್ಸು ಮಾಡಲಾಗಿದೆ.
ಮಾಹಿತಿ ಹಕ್ಕು ಕಾಯ್ದೆಯ ಅನುಷ್ಟಾನದಲ್ಲಿ ಅಧಿಕಾರಿಗಳ ಪಾತ್ರ ಅತೀ ದೊಡ್ಡದಾಗಿದ್ದು, ಅಧಿಕಾರಿಗಳ ನಿರ್ಲ್ಯಕ್ಷತೆಯಿಂದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡದೇ ಸರ್ಕಾರಿ ಯೋಜನೆಗಳು ಸಕಾಲದಲ್ಲಿ ಸಾಮಾನ್ಯರಿಗೆ ದೊರಕದೆ ಇರುತ್ತದೆ. ಮಾಹಿತಿ ಹಕ್ಕು ಸಾರ್ವಜನಿಕರ ಹಿತವನ್ನು ಕಾಪಾಡುವ ದೊಡ್ಡ ಅಸ್ತ್ರವಾಗಿದ್ದು ಅಧಿಕಾರಿಗಳ ನಿರ್ಲ್ಯಕ್ಷತೆಯನ್ನು ಹೊಗಲಾಡಿಸುವ ಪ್ರಯತ್ನದಲ್ಲಿ ಕರ್ನಾಟಕ ಮಾಹಿತಿ ಆಯೋಗವು ಸಕ್ರಿಯಾವಾಗಿ ಕಾರ್ಯ ನಿರ್ವಹಿಸುತ್ತಿದೆ.