ನಟ ಚೇತನ್​ ವಿವಾದಾತ್ಮಕ ಹೇಳಿಕೆಗೆ ಪೇಜಾವರಶ್ರೀ ಪ್ರತಿಕ್ರಿಯೆ; ಬ್ರಾಹ್ಮಣತ್ವವನ್ನು ವ್ಯಾಖ್ಯಾನಿಸಿದ ಸ್ವಾಮೀಜಿ ಹೇಳಿದ್ದಿಷ್ಟು..

1374192
Published on

ಮಂಡ್ಯ: 'ಕಾಂತಾರ' ಸಿನಿಮಾ ಹಿನ್ನೆಲೆಯಲ್ಲಿ ಹಿಂದೂ ಸಂಸ್ಕೃತಿ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಚೇತನ್​ ಬಗ್ಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಪ್ರತಿಕ್ರಿಯಿಸಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಹಿಂದುತ್ವ ಹಾಗೂ ಬ್ರಾಹ್ಮಣತ್ವ ಎರಡರ ಬಗ್ಗೆಯೂ ಮಾತನಾಡಿದ್ದಾರೆ.

ಮದ್ದೂರಿನಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡುತ್ತ, ನಟ ಚೇತನ್ ವಿವಾದಾತ್ಮಕ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ಚೇತನ್ ಪ್ರಚಾರಕ್ಕಾಗಿ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಚೇತನ್ ಯಾವ ನೆಲೆಯಲ್ಲಿ ಮಾತನಾಡುತ್ತಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ಅವರವರು ನೋಡುವ ದೃಷ್ಟಿಕೋನದಲ್ಲಿ ಎಲ್ಲವೂ ಅಡಗಿರುತ್ತದೆ. ಯಾರದ್ದೇ ನಂಬಿಕೆ-ಆಚರಣೆಗಳನ್ನು ವಿರೋಧಿಸುವುದು ತಪ್ಪು ಎಂದ ಸ್ವಾಮೀಜಿ, ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಹಿಂದುತ್ವ ಹಾಗೂ ಬ್ರಾಹ್ಮಣತ್ವ ಬೇರೆ ಬೇರೆ ಅಲ್ಲ. ಹಿಂದುತ್ವ ವಿಶಾಲವಾದದ್ದು, ಅದರೊಳಗೆ ಬ್ರಾಹ್ಮಣತ್ವವು ಬರುತ್ತದೆ ಎಂದು ಶ್ರೀಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net