ಹಿಟ್ ಆ್ಯಂಡ್ ರನ್‌ಗೆ ಪಾದಚಾರಿ ಬಲಿ

Accident (16)
Published on

ಬೆಂಗಳೂರು: ನಾಯಂಡಹಳ್ಳಿ ರಿಂಗ್ ರೋಡ್‌ನಲ್ಲಿ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಮೃತಪಟ್ಟಿದ್ದಾರೆ.

ನಾಯಂಡಹಳ್ಳಿಯ ಮದಿ ಅಳಗನ್ (50) ಮೃತ ಪಾದಾಚಾರಿ. ಶನಿವಾರ ರಾತ್ರಿ 8 ಗಂಟೆಯಲ್ಲಿ ನಾಯಂಡಹಳ್ಳಿಯ ರಿಂಗ್ ರಸ್ತೆಯ ಬನಶಂಕರಿ ಟಿಫನ್ ಸೆಂಟರ್ ಬಳಿ ಅಳಗನ್ ರಸ್ತೆ ದಾಟುತ್ತಿದ್ದರು. ನಾಯಂಡಹಳ್ಳಿ ಜಂಕ್ಷನ್ ಕಡೆಯಿಂದ ನಾಗರಬಾವಿ ಸರ್ಕಲ್ ಕಡೆಗೆ ವೇಗವಾಗಿ ಬಂದಿರುವ ಅಪರಿಚಿತ ವಾಹನ ಏಕಾಏಕಿ ಅಳಗನ್‌ಗೆ ಡಿಕ್ಕಿ ಹೊಡೆದಿದೆ.

ಗುದ್ದಿದ ರಭಸಕ್ಕೆ ಪಾದಚಾರಿ ಮುಖ, ತಲೆಗೆ ಗಂಭೀರ ಗಾಯವಾಗಿತ್ತು. ಸ್ಥಳೀಯರು ನಿಮ್ಹಾನ್ಸ್‌ಗೆ ದಾಖಲಿಸಿದ್ದಾರೆ. ಭಾನುವಾರ ಮುಂಜಾನೆ 5.30ರಲ್ಲಿ ಚಿಕಿತ್ಸೆ ಫಲಿಸದೆ ಅಳಗನ್ ಮೃತಪಟ್ಟಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ವಾಹನ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net