ರಗಡ್ ಲುಕ್​ನಲ್ಲಿ ರಾಮ್ ಚರಣ್! ‘ಪೆದ್ದಿ’ ಗ್ಲಿಂಪ್ಸ್ ಬೆನ್ನಲ್ಲೇ ಫ್ಯಾನ್ಸ್​ಗೆ ಸಿಹಿಸುದ್ದಿ | Peddi

ವಿಜಯವಾಣಿ - 2025-04-07T171726.939
Published on

Peddi: ಗ್ಲೋಬಲ್ ಸ್ಟಾರ್, ತೆಲುಗು ನಟ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಪೆದ್ದಿ'. ರಾಷ್ಟ್ರ ಪ್ರಶಸ್ತಿ ವಿಜೇತ ಬುಚ್ಚಿ ಬಾಬು ಸನ ನಿರ್ದೇಶನದ ಈ ಚಿತ್ರದ ಫಸ್ಟ್ ಲುಕ್ ಈಗಾಗಲೇ ಭಾರೀ ಸದ್ದು ಮಾಡಿದೆ. ಇದೀಗ ಚಿತ್ರತಂಡ ರಾಮನವಮಿ ದಿನದಂದೇ ಸಿನಿಮಾದ ಫಸ್ಟ್ ಝಲಕ್ ರಿಲೀಸ್ ಮಾಡಿದ್ದು, ರಿಲೀಸ್​ ದಿನಾಂಕವನ್ನೂ ಅಧಿಕೃತವಾಗಿ ಘೋಷಿಸಿದೆ.

ಪವರ್ ಫುಲ್ ಡೈಲಾಗ್ ಹೊಡೆಯುತ್ತಾ ಸಿಗರೇಟ್ ಬಾಯಲ್ಲಿ ಕಚ್ಚಿಕೊಂಡು ಭರ್ಜರಿ ಆಕ್ಷನ್ ಮಾಡುತ್ತಾ ರಗಡ್ ಲುಕ್​ನಲ್ಲಿ ರಾಮ್ ಚರಣ್ ಎಂಟ್ರಿ ಕೊಟ್ಟಿದ್ದಾರೆ. ರಾಮ್ ಅಬ್ಬರಕ್ಕೆ ಫಿದಾ ಆಗಿರುವ ಫ್ಯಾನ್ಸ್​ಗಳಿಗೆ 'ಪೆದ್ದಿ' ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಚೆರ್ರಿ ಹುಟ್ಟುಹಬ್ಬದ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರವು ಮುಂದಿನ ವರ್ಷದ ಮಾರ್ಚ್ 27ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ.

ರಾಮ್ ಚರಣ್​ಗೆ ಜೋಡಿಯಾಗಿ ಪೆದ್ದಿಯಲ್ಲಿ ಜಾನ್ವಿ ಕಪೂರ್ ಅಭಿನಯಿಸುತ್ತಿದ್ದು, ಚಿತ್ರದಲ್ಲಿ ಕನ್ನಡ ಚಿತ್ರರಂಗದ ಕರುನಾಡ ಚಕ್ರವರ್ತಿ ಶಿವರಾಜ್​ ಕುಮಾರ್​, ಜಗಪತಿ ಬಾಬು, ದಿವ್ಯೆಂದು ಶರ್ಮಾ ಅವರ ತಾರ ಬಳಗವಿದೆ. ಮೈತ್ರಿ ಮೂವೀ ಮೇಕರ್ಸ್, ಸುಕುಮಾರ್ ರೈಟಿಂಗ್ ಹಾಗೂ ವೃದ್ಧಿ ಸಿನಿಮಾಸ್ ಅಡಿಯಲ್ಲಿ ಚಿತ್ರ ತಯಾರಾಗುತ್ತಿದ್ದು, ಮ್ಯೂಸಿಕ್​ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಸಂಗೀತ, ನವೀನ್ ನೂಲಿ‌ ಸಂಕಲನ, ಆರ್. ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net