15ಕ್ಕೆ ಶಿವಮೊಗ್ಗದಲ್ಲಿ ರಾಷ್ಟ್ರಧ್ವಜದೊಂದಿಗೆ ಶಾಂತಿ ನಡಿಗೆ

sripal
ಸುದ್ದಿಗೋಷ್ಠಿಯಲ್ಲಿ ಕೆ.ಪಿ.ಶ್ರೀಪಾಲ್ ಮಾತನಾಡಿದರು. ಾದರ್ ಕ್ಲಿರ್ಡ್ ರೋಷನ್‌ಪಿಂಟೋ, ಎಂ.ಗುರುಮೂರ್ತಿ, ಎಚ್.ಆರ್.ಬಸವರಾಜಪ್ಪ, ಕಿರಣ್‌ಕುಮಾರ್ ಮುಂತಾದವರಿದ್ದರು.
Published on

ಶಿವಮೊಗ್ಗ: ಸೌಹಾರ್ದವೇ ಹಬ್ಬ ಶೀರ್ಷಿಕೆಯಡಿ ಸೆ.15ರ ಸಂಜೆ 4ಕ್ಕೆ ಸಿಮ್ಸ್‌ನಿಂದ ಸೈನ್ಸ್ ಮೈದಾನದವರೆಗೆ ಶಾಂತಿ ನಡಿಗೆ ಹಮ್ಮಿಕೊಳ್ಳಲಾಗಿದೆ. ಬಳಿಕ ಸೈನ್ಸ್ ಮೈದಾನದಲ್ಲಿ ಶಾಂತಿ ಸಭೆ ನಡೆಯಲಿದೆ ಎಂದು ಆಯೋಜನಾ ಸಮಿತಿ ಸಂಚಾಲಕ ಕೆ.ಪಿ.ಶ್ರೀಪಾಲ್ ತಿಳಿಸಿದರು.

ಈ ಬಾರಿ ಶಿವಮೊಗ್ಗದಲ್ಲಿ ಗಣೇಶ ಮೂರ್ತಿ ವಿಸರ್ಜನೆ ದಿನದಂದೇ ಈದ್ ಮಿಲಾದ್ ಮೆರವಣಿಗೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂಬುದು ಈ ಶಾಂತಿ ನಡಿಗೆಯ ಉದ್ದೇಶವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಾಂತಿ ನಡಿಗೆಯಲ್ಲಿ ಎರಡು ಸಾವಿರ ಅಡಿ ಉದ್ದದ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಸಾವಿರಾರು ಮಂದಿ ಹೆಜ್ಜೆ ಹಾಕಲಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಧಾರ್ಮಿಕ ಮುಖಂಡರು ಇದರಲ್ಲಿ ಭಾಗವಹಿಸುವರು. ನಡಿಗೆಯಲ್ಲಿ ತ್ರಿವರ್ಣ ಧ್ವಜ ಹೊರತುಪಡಿಸಿ ಬೇರೆ ಯಾವುದೇ ಬ್ಯಾನರ್‌ಗಳು ಇರುವುದಿಲ್ಲ. ಶಾಂತಿ ಸಭೆ ವೇದಿಕೆಯಲ್ಲಿ ಧರ್ಮಗುರುಗಳು ಮಾತ್ರ ಇರಲಿದ್ದಾರೆ. ಸಂಘಟಕರು ವೇದಿಕೆ ಏರುವುದಿಲ್ಲ ಎಂದು ತಿಳಿಸಿದರು.
ಮುಸ್ಲಿಂ ಧರ್ಮಗುರು ಅಬ್ದುಲ್ ಲತ್ೀಸಅದಿ ಮಾತನಾಡಿ, ಈದ್‌ಮಿಲಾದ್ ಹಾಗೂ ಗಣಪತಿಹಬ್ಬದಲ್ಲಿ ಮೆರವಣಿಗೆಯೇ ಪ್ರಧಾನವಾಗಿರುತ್ತದೆ. ಈ ಎರಡೂ ಮೆರವಣಿಗೆಗಳು ಮಾದರಿಯಾಗಿ ನಡೆಯಲಿ ಎಂಬುದೇ ನಮ್ಮ ಆಶಯವಾಗಿದೆ ಎಂದರು.
ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಡಿಎಸ್‌ಎಸ್ ಸಂಚಾಲಕ ಎಂ.ಗುರುಮೂರ್ತಿ, ಎಸ್‌ಎಂಎಸ್‌ಎಸ್ ಅಧ್ಯಕ್ಷ ಾದರ್ ಕ್ಲಿರ್ಡ್ ರೋಷನ್‌ಪಿಂಟೋ, ಒಪನ್ ಮೈಂಡ್ ಸ್ಕೂಲ್‌ನ ಕಿರಣ್‌ಕುಮಾರ್, ಪ್ರಮುಖರಾದ ಕೃಷ್ಣಮೂರ್ತಿ, ವಸ್ೀ, ಜಗದೀಶ್, ಹರತಾಳು ಸುರೇಶ್, ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net