

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಗ್ರೂಪ್ ‘ಸಿ’ ವೃಂದದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅಭ್ಯರ್ಥಿಗಳ ನೇಮಕಾತಿ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಲಿದೆ. ಸೆ.25 ಹಾಗೂ 26ರಂದು ಆಯೋಗದ ಕಚೇರಿಯಲ್ಲಿ ಹಾಜರಿರುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಿದೆ.
ಉಳಿಕೆ ಮೂಲ ವೃಂದದ ಒಟ್ಟು 150 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ದಾಖಲೆ ಪರಿಶೀಲನೆಗಾಗಿ ಒಟ್ಟು 447 ಅಭ್ಯರ್ಥಿಗಳನ್ನು ಆಹ್ವಾನಿಸಿದೆ.