ಭದ್ರಾ ನಾಲೆಯಲ್ಲಿ ಮುಳುಗಿ ಪಿಡಿಒ ಸಾವು

pdo
ಜಿ.ವೆಂಕಟೇಶ್
Published on

ಭದ್ರಾವತಿ; ತಾಲೂಕಿನ ಅತ್ತಿಗುಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ.ವೆಂಕಟೇಶ್ (52) ಶನಿವಾರ ರಾತ್ರಿ ಭದ್ರಾ ನಾಲೆಗೆ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ಬಾರಂದೂರು ನಿವಾಸಿಯಾದ ಇವರು ಜಮೀನಿಗೆ ನೀರು ಹಾಯಿಸಲು ರಾತ್ರಿ ಬೈಕಿನಲ್ಲಿ ಮನೆಯಿಂದ ಹೋಗಿದ್ದರು. ಜಮೀನಿನ ಬಳಿ ಹರಿಯುತ್ತಿರುವ ಗೊಂದಿ ನಾಲೆ ಬಳಿ ಬೈಕ್ ನಿಲ್ಲಿಸಿ ನಾಲೆಗೆ ಅಡ್ಡಲಾಗಿ ಇಟ್ಟಿರುವ ತುಂಡುಗಳ ಮೇಲೆ ನಡೆದು ಸಾಗುವಾಗ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದಿದ್ದಾರೆ. ಭಾನುವಾರ ಬೆಳಗ್ಗೆ ಎರೇಹಳ್ಳಿ ಗ್ರಾಮದ ಬಳಿ ಶವ ಪತ್ತೆಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ವೆಂಕಟೇಶ್ ಅವರು ಬಾರಂದೂರು ಪ್ರಭಾರ ಪಿಡಿಒ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಸ್ಥಳಕ್ಕೆ ಪೊಲೀಸರು. ತಾಲೂಕು ಅಧಿಕಾರಿಗಳು ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net