ಡಾ.ರಾಜ್‌ಕುಮಾರ್ ಜನ್ಮದಿನದ ಅಂಗವಾಗಿ ಪಾಯಸ ವಿತರಣೆ

24blrp2
ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಬೇಲೂರಿನ ಬಸವೇಶ್ವರ ವೃತ್ತದಲ್ಲಿರುವ ದ್ವಜಸ್ತಂಭದ ಆವರಣಲ್ಲಿ ಅಭಿಮಾನಿಗಳಿಗೆ ಸಿಹಿ ಪಾಯಸ ವಿತರಿಸಲಾಯಿತು.
Published on

ಬೇಲೂರು: ಚಲನಚಿತ್ರ ನಟ ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಅವರ 98ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಬೇಲೂರು ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಡಾ.ರಾಜ್‌ಕುಮಾರ್ ದ್ವಜಸ್ತಂಭದ ಆವರಣ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗುರುವಾರ ನೆರೆದಿದ್ದವರಿಗೆ ಸಿಹಿ ಪಾಯಸ ವಿತರಿಸಿದರು.

ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ತೀರ್ಥಂಕರ್ ಮಾತನಾಡಿ, ಡಾ.ರಾಜಕುಮಾರ್ ಅವರು ಕನ್ನಡಿಗರ ಶಕ್ತಿಯಾಗಿದ್ದಾರೆ. 200ಕ್ಕೂ ಅಧಿಕ ಚಲನಚಿತ್ರಗಳನ್ನು ನಾಡಿಗೆ ನೀಡುವ ಮೂಲಕ ಕನ್ನಡಕ್ಕೆ ಮಹತ್ವ ನೀಡಿದ್ದಾರೆ. ಅವರು ಕೇವಲ ಚಿತ್ರ ನಟರಾಗಿರದೆ ನಾಡು, ನುಡಿ, ನೆಲ ಜಲಕ್ಕೆ ಅನ್ಯಾಯವಾದಾಗ ನಡೆಸಿದ ಹೋರಾಟ ಇಂದಿಗೂ ಅವಿಸ್ಮರಣೀಯವಾಗಿದೆ. ಕನ್ನಡಾ ಭಿಮಾನಿಗಳಿಗೆ ಸದಭಿರುಚಿಯ ಚಿತ್ರಗಳ ಮೂಲಕ ಮನೆ ಮನದಲ್ಲಿ ಮೆಚ್ಚುಗೆ ಗಳಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಬಹುತೇಕ ಚಿತ್ರನಟರು ತಾವು ನಟಿಸುವ ಚಲನಚಿತ್ರಕ್ಕೂ ಅವರ ಬದುಕಿಗೂ ಭಿನ್ನವಾಗಿರುತ್ತದೆ. ಆದರೆ ರಾಜ್‌ಕುಮಾರ್ ಮಾತ್ರ ನಡೆ-ನುಡಿಯಲ್ಲಿ ಒಂದಾಗಿ ಇಂದಿನ ಯುವ ಜನತೆಗೆ ಮಾದರಿಯಾಗಿದ್ದು, ಅವರ 97ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳ ಸಂಘದಿಂದ ಆಚರಿಸುತಿದ್ದೇವೆ. 100ನೇ ವರ್ಷದ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.

ಡಾ.ರಾಜ್‌ಕುಮಾರ್ ಅಭಿಮಾನಿ ಸಂಘದ ಕಾರ್ಯದರ್ಶಿ ಫಣೀಂದ್ರ, ಮುಖಂಡರಾದ ಬಿ.ಎಸ್.ಮಂಜುನಾಥ, ವೆಂಕಟೇಶ್, ರವಿ ಕುಮಾರ್, ಪುರುಷೋತ್ತಮ, ತಮ್ಮಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net