ಪ್ರಯಾಣ ಭತ್ಯೆ ಸೇರಿಸಿ ಬೇಗ ವೇತನ ಕೊಡಿ

nagrega protest
ಶೀಘ್ರ ವೇತನ ಪಾವತಿಗೆ ಒತ್ತಾಯಿಸಿ ಉದ್ಯೋಗ ಖಾತ್ರಿ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಪ್ರದೀಪ್, ಕಾರ್ತಿಕ್, ಇಂದುಶ್ರೀ, ಶೀಲಾ ಪ್ರತಿಭಟನೆಯಲ್ಲಿದ್ದರು.
Published on

ಶಿವಮೊಗ್ಗ: ಉದ್ಯೋಗ ಖಾತ್ರಿ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ವೇತನ ಪಾವತಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ಸೋಮವಾರ ಉದ್ಯೋಗ ಖಾತ್ರಿ ಸಿಬ್ಬಂದಿ ಜಿಪಂ ಸಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹೊರ ಗುತ್ತಿಗೆ ಆಧಾರದ ಮೇಲೆ ಸಂಯೋಜಕರು, ಅಕೌಂಟ್ ಮ್ಯಾನೇಜರ್, ಆಡಳಿತ ಸಹಾಯಕರು, ತಾಂತ್ರಿಕ ಸಂಯೋಜಕರು, ಡಾಟಾ ಎಂಟ್ರಿ ಆಪರೇಟರ್ ಸೇರಿದಂತೆ ಹಲವು ವಿಭಾಗಗಳಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಆದರೆ ಏಪ್ರಿಲ್‌ನಿಂದ ಇದುವರೆಗೂ ನಮಗೆ ವೇತನ ನೀಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವೇತನ ಸಿಗದ ಕಾರಣ ಜೀವನ ನಿರ್ವಹಣೆ ಕಷ್ಟವಾಗಿದೆ. ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿರುವ ಪ್ರಯಾಣ ಭತ್ಯೆಯನ್ನೂ ನೀಡಿಲ್ಲ. ಕೂಡಲೇ ಬಾಕಿ ವೇತನ, ಪ್ರಯಾಣ ಭತ್ಯ ಪಾವತಿ ಮಾಡಬೇಕು. ಪ್ರತಿ ತಿಂಗಳು ನಿಗದಿತ ದಿನದಂದು ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನಾಕಾರರ ಅಹವಾಲು ಆಲಿಸಿದ ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಶೀಘ್ರವೇ ವೇತನ ಪಾವತಿಯ ಭರವಸೆ ನೀಡಿದರು. ಪ್ರಮುಖರಾದ ಪ್ರದೀಪ್, ಶೀಲಾ, ಕಾರ್ತಿಕ್, ಇಂದುಶ್ರೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net