

ಕಲಬುರಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತೊಗರಿನಾಡು ಕಲಬುರಗಿಯಲ್ಲಿ 'ಪೇ ಸಿಎಂ' ಪೋಸ್ಟರ್ ಮೂಲಕ ಕಾಂಗ್ರೆಸ್ ಸ್ಚಾಗತಿಸಿದ್ದು, ಬಿಜೆಪಿ ಮತ್ತು ಸರ್ಕಾರ ಮುಜುಗರ ಅನುಭವಿಸುವಂತಾಗಿದೆ.
ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದ ಹಿನ್ನೆಲೆ ಇಂದು(ಸೋಮವಾರ) ಕಲಬುರಗಿಗೆ ಸಿಎಂ ಆಗಮಿಸಿದ್ದಾರೆ. ಸಿಎಂ ಬರುವ ಕೆಲ ಸಮಯದ ಮುನ್ನವೇ ಕಲಬುರಗಿ ನಗರದ ಪ್ರಮುಖ ಬೀದಿಗಳಲ್ಲಿ 'ಪೇ ಸಿಎಂ' ಪೋಸ್ಟರ್ಗಳನ್ನು ಎಲ್ಲಡೆ ಅಂಟಿಸಲಾಗಿದೆ.
ಸಂಗಮೇಶ್ವರ ಕಾಲನಿ, ಜೇವರ್ಗಿ ಕಾಲನಿ, ಜಗತ್ ಸರ್ಕಲ್ ವೃತ್ತ... ಸೇರಿ ಇನ್ನಿತರ ಕಡೆಗಳಲ್ಲಿ ಪೋಸ್ಟರ್ಗಳನ್ನು ಅಂಟಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ನಿರಾಕರಿಸಿದರು.