ಸಕಾಲಕ್ಕೆ ಸರಿಯಾಗಿ ಸಾಲ ಮರುಪಾವತಿಸಿ

13kdr5
ಶಿವ ಪತ್ತಿನ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ಕೆ.ಎನ್.ಬೊಮ್ಮಣ್ಣ ಉದ್ಘಾಟಿಸಿದರು. ಎಚ್.ಎಂ.ನಂದಕುಮಾರ್, ಎಸ್.ಜಿ.ರಾಮಪ್ಪ, ಕೆ.ಎಂ.ಜಯಣ್ಣ, ಎಸ್.ವಿ. ಬಸವರಾಜಪ್ಪ ಇದ್ದರು.
Published on

ಕಡೂರು: ಸಂಘದಿಂದ ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ಸಾಲ ಮರುವಾಪತಿ ಮಾಡಿದರೆ ಸಂಘ ಹೆಚ್ಚು ಲಾಭಗಳಿಸಲು ಸಹಕಾರಿಯಾಗುತ್ತದೆ ಎಂದು ಶಿವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎನ್.ಬೊಮ್ಮಣ್ಣ ಹೇಳಿದರು.
ಭಾನುವಾರ ಪಟ್ಟಣದ ವೇದಾವತಿ ಬಾಲಿಕಾ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ,11ವರ್ಷದ ಹಿಂದೆ ಆರಂಭವಾದ ಶಿವ ಪತ್ತಿನ ಸಹಕಾರ ಸಂಘ ಇಂದು ಬೃಹತ್ ಹಣಕಾಸು ಸಂಸ್ಥೆಯಾಗಿ ಬೆಳೆದಿದೆ. ಸಂಘ ತಾನು ಬೆಳೆಯುವ ಜತೆಗೆ ಸಂಘದ ಸದಸ್ಯರನ್ನು ಬೆಳೆಸಿದೆ. ಸಂಘದಲ್ಲಿ 5,193 ಸದಸ್ಯರಿದ್ದು, 2.78 ಕೋಟಿ ರೂ.ಷೇರು ಬಂಡವಾಳ, 33.13 ಕೋಟಿ ರೂ. ದುಡಿಯುವ ಬಂಡವಾಳ, 26.79 ಕೋಟಿ ರೂ.ಠೇವಣಿ ಇದೆ ಎಂದು ಮಾಹಿತಿ ನೀಡಿದರು.
ಸದಸ್ಯರ ಸಂಖ್ಯೆ ಹೆಚ್ಚಾದಂತೆ ಸಾಲದ ಬೇಡಿಕೆಯೂ ಹೆಚ್ಚುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 28.39 ಕೋಟಿ ರೂ. ಸಾಲ ನೀಡಲಾಗಿದೆ. ಸಂಘ ಈ ಬಾರಿ 64.45 ಲಕ್ಷ ಲಾಭಗಳಿಸಿದೆ. ಸುಸ್ತಿಯಾಗಿರುವ ಸಾಲ ವಸೂಲಿ ಮಾಡಿ ಸಂಘದ ಲಾಭ ಹೆಚ್ಚಿಸಬೇಕಿದೆ. ಸಂಘದ ಸಿಬ್ಬಂದಿ ಹೆಚ್ಚಿನ ಶ್ರಮ ವಹಿಸಲಿದ್ದಾರೆ ಎಂದು ಹೇಳಿದರು.
ಉಪಾಧ್ಯಕ್ಷ ಎಚ್.ಎಂ.ನಂದಕುಮಾರ್, ನಿರ್ದೇಶಕರಾದ ಎಸ್.ಜಿ.ರಾಮಪ್ಪ,ಕೆ.ಎಂ.ಜಯಣ್ಣ, ಎಸ್.ವಿ.
ಬಸವರಾಜಪ್ಪ, ಬಿ.ಎಲ್.ಚಿದಾನಂದ, ಎನ್.ಒ.ರವಿಕುಮಾರ್, ಡಿ.ಈಶ್ವರಪ್ಪ, ಆರ್.ರಮೇಶ್, ಕೆ.ಟಿ.ಮಹೇಶ್, ಗೀತಾ ಶ್ರೀನಾಥ್, ಎಲ್.ಎಸ್.ಶೈಲಜಾ ಸಿಬ್ಬಂದಿಗಳಾದ ಸಿ.ಆರ್.ರಶ್ಮಿ, ಎಚ್.ಬಿ.ರಘು, ಎಂ.ಜಿ.ಕಲ್ಲೆಶಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net