ಪ್ರತಿ ತಿಂಗಳಾಂತ್ಯದಲ್ಲೇ ಅನ್ನಭಾಗ್ಯ ಹಣ ಸಂದಾಯ ಮಾಡಿ; ಮುನಿಯಪ್ಪ ಸೂಚನೆ

muni
Published on

ಬೆಂಗಳೂರು: ಅನ್ನ ಭಾಗ್ಯ ಯೋಜನೆಯ ಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಪ್ರತಿ ತಿಂಗಳ ಅಂತ್ಯದ ಒಳಗೆ ಹಣ ಸಂದಾಯವಾಗುವಂತೆ ಕ್ರಮ ತೆಗೆದುಕೊಳ್ಳುವಂತೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ವಿದಾನಸೌಧದಲ್ಲಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಇಲಾಖೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಪಿಎಲ್, ಬಿಪಿಎಲ್ ಕಾರ್ಡ್‌ಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ಇಲಾಖೆಯಲ್ಲಿ ಪಡಿತರದಾರರಿಗೆ ಸರಬರಾಜು ಆಗುತ್ತಿರುವ ಅಕ್ಕಿ,ರಾಗಿ, ಜೋಳ, ಇವು ಗುಣಮಟ್ಟದಿಂರಬೇಕು ಎಂದು ತಾಕೀತು ಮಾಡಿದರು.

ಗೋದಾಮಿನಲ್ಲಿ ಸುಚಿತ್ವ ಕಾಪಾಡಬೇಕು ಮತ್ತು ವಿಲೇವಾರಿ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳನ್ನು ಖಚಿತಪಡಿಸಿಕೊಂಡು ಸರಬರಾಜು ಮಾಡಬೇಕು ಎಂದರು.

ಸರ್ಕಾರದ ಕಾರ್ಯದರ್ಶಿ ರಮಣದೀಪ್ ಚೌಧರಿ, ಆಯುಕ್ತರಾದ ವಾಸಿರೆಡ್ಡಿ ವಿಜಯ ಜೋತ್ಸ್ಸ್ನಾ, ಆಹಾರ ನಿಗಮ ನಿರ್ದೇಶಕ ಚಂದ್ರಕಾಂತ್, ಕಾನೂನು ಮಾಪನ ಇಲಾಖೆ ನಿಯಂತ್ರಕರಾದ ಅನಿತಾ ಲಕ್ಷ್ಮೀ, ಆಹಾರ ಆಯೋಗದ ಕಾರ್ಯದರ್ಶಿ ಸುಜಾತ ಹೊಸಮನಿ, ಸಚಿವರ ಕಾರ್ಯದರ್ಶಿ ಡಾ.ಎಚ್.ನಟರಾಜ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net