ಆಂಧ್ರದ ಕೆಂಪು ಚಂದನ ಹರಾಜು ಹಣ ಕರ್ನಾಟಕಕ್ಕೆ ಹೋಗಿದೆ: ಪವನ್ ಗಂಭೀರ ಆರೋಪ

pavan
Published on

ಅಮರಾವತಿ: ಕಳೆದ ಐದು ವರ್ಷಗಳಲ್ಲಿ ಆಂಧ್ರಪ್ರದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿತ್ತು ಎಂದು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದ್ದಾರೆ.

ಕಾಕಿನಾಡ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ತಿರುಪತಿಯ ಶೇಷಾಚಲಂ ಅರಣ್ಯದಲ್ಲಿ ಕಡಿದ 140 ಕೋಟಿ ರೂ.ಮೌಲ್ಯದ ಕೆಂಪು ಚಂದನದ ಮರದ ತುಂಡುಗಳನ್ನು ಕದ್ದವರು, ಕರ್ನಾಟಕದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಹಿಂದಿನ ವೈಎಸ್​ಆರ್​ ಕಾಂಗ್ರೆಸ್​ನ ಮುಖ್ಯಮಂತ್ರಿ ಜಗನ್ ಸರ್ಕಾರ​ ವಂಚಿಸಿಸಿತ್ತು ಎಂದು ಪವನ್ ಹೇಳಿದ್ದಾರೆ.

ಈ ಕೆಂಪು ಚಂದನದ ಮರದ ತುಂಡುಗಳ ಹರಾಜಿನಿಂದ ಬಂದ ಹಣ ಕರ್ನಾಟಕ ಸರ್ಕಾರಕ್ಕೆ ಹೋಗಿದೆ ಎಂದು ಆರೋಪಿಸಿದರು.

ಪುತ್ರಿ ಆದ್ಯಾ ಜೊತೆ ಸೆಲ್ಫೀ: ಸ್ವಾತಂತ್ರ ದಿನಾಚರಣೆಯಲ್ಲಿ ಪವನ್ ಕಲ್ಯಾಣ್ ತಮ್ಮ ಮಗಳು ಆದ್ಯಾ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಆ ಫೋಟೋ ನೋಡಿ ಪವನ್ ಕಲ್ಯಾಣ್ ಅಭಿಮಾನಿಗಳು ಮತ್ತು ಜನಸೇನಾ ಕಾರ್ಯಕರ್ತರು ಹುಚ್ಚೆದ್ದು ಕುಣಿದಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net