ದಾಖಲೆ ಮೊತ್ತಕ್ಕೆ ಸೇಲಾಯ್ತು ಪವನ್ ಕಲ್ಯಾಣ್ ನಟನೆಯ 'ಓಜಿ' ಚಿತ್ರದ ಡಿಜಿಟಲ್ ಹಕ್ಕು! ಈ ಒಟಿಟಿಯಲ್ಲಿ ನೋಡಿ

Untitled design (55)
Published on

ಆಂಧ್ರಪ್ರದೇಶ: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ಟಾಲಿವುಡ್​ನ ಪವರ್​ ಸ್ಟಾರ್​, ನಟ ಪವನ್ ಕಲ್ಯಾಣ್ ಇದೀಗ ತಮ್ಮ ಮುಂಬರುವ ಚಿತ್ರಗಳಾದ ‘ಓಜಿ’, ‘ಉಸ್ತಾದ್ ಭಗತ್ ಸಿಂಗ್’ ಮತ್ತು ‘ಹರಿಹರ ವೀರ ಮಲ್ಲು’ ಚಿತ್ರಗಳ ಮೂಲಕ ಸಖತ್​ ಸುದ್ದಿಯಾಗುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಸಿನಿಮಾಗಳ ಕುರಿತಂತೆ ಹೊಸ ಹೊಸ ಮಾಹಿತಿ ಪಡೆಯುವ ನಿರೀಕ್ಷೆಯಲ್ಲಿರುವ ಅಭಿಮಾನಿಗಳು ಸದ್ಯ ಸಿನಿಮಾ ರಿಲೀಸ್​ಗಾಗಿ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಇನ್ನು ಈ ಮಧ್ಯೆ ಓಜಿ ಚಿತ್ರದ ಡಿಜಿಟಲ್ ಹಕ್ಕುಗಳು ರಿಲೀಸ್​ಗೂ ಮುನ್ನವೇ ದಾಖಲೆ ಮೊತ್ತಕ್ಕೆ ಖರೀದಿಯಾಗಿದೆ.

'ಸಾಹೋ' ಚಿತ್ರದ ನಿರ್ದೇಶಕ ಸುಜಿತ್ ರೆಡ್ಡಿ ನಿರ್ದೇಶನದ ಗ್ಯಾಂಗ್​ಸ್ಟರ್​ ಸಿನಿಮಾ 'ದೇ ಕಾಲ್ ಹಿಮ್ ಓಜಿ' ಇದೀಗ ದಿನದಿಂದ ದಿನಕ್ಕೆ ಭಾರೀ ಕುತೂಹಲ ಕೆರಳಿಸಿದ್ದು, ಪವನ್ ಕಲ್ಯಾಣ್ ಅವರನ್ನು ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತೀವ್ರ ಕಾತರ ವ್ಯಕ್ತಪಡಿಸಿದ್ದಾರೆ. ಡಿವಿವಿ ಎಂಟರ್​​ಟೈನ್​ಮೆಂಟ್ಸ್​ ಬ್ಯಾನರ್​ನಡಿ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿರುವ 'ಓಜಿ' ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಇದೀಗ ನೆಟ್​ಫ್ಲಿಕ್ಸ್​ ಖರೀದಿಸಿದ್ದು, ಬರೋಬ್ಬರಿ 90 ಕೋಟಿ ರೂ. ಕೊಟ್ಟು ತನ್ನದಾಗಿಸಿಕೊಂಡಿದೆ. ದಾಖಲೆ ಮೊತ್ತಕ್ಕೆ ಸೇಲಾದ ಈ ಚಿತ್ರ ಇದೀಗ ಟಾಲಿವುಡ್​ ಮಂದಿಯ ಹುಬ್ಬೇರುವಂತೆ ಮಾಡಿದೆ.

ಕೇವಲ ತೆಲುಗು ಭಾಷೆಯಲ್ಲಿ ಮಾತ್ರವಲ್ಲದೇ ತಮಿಳು, ಹಿಂದಿಯಲ್ಲಿ ತೆರೆಕಾಣಲಿರುವ ಚಿತ್ರದಲ್ಲಿ ಪವನ್ ಕಲ್ಯಾಣ್, ಅರ್ಜುನ್ ದಾಸ್, ಇಮ್ರಾನ್ ಹಶ್ಮಿ, ಪ್ರಿಯಾಂಕಾ ಮೋಹನ್ ಮುಂತಾದವರ ತಾರಾಗಣವಿದೆ. ಎಸ್​. ಥಮನ್​ ಅವರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net