ಕ್ವಾರೆಂಟೈನ್​ನಲ್ಲಿ ತೆಲುಗು ನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್​

pawan
Published on

ಹೈದರಾಬಾದ್ : ಜನಸೇನಾ ಪಕ್ಷದ ಹಲವು ಸದಸ್ಯರಿಗೆ ಕರೊನಾ ಪರೀಕ್ಷೆಯಲ್ಲಿ ಪಾಸಿಟೀವ್ ಬಂದ ನಂತರ ಪಕ್ಷದ ಅಧ್ಯಕ್ಷರಾದ ತೆಲುಗು ನಟ ಪವನ್ ಕಲ್ಯಾಣ್ ಅವರು ಮುನ್ನೆಚ್ಚರಿಕೆಯಾಗಿ ಸ್ವಯಂ ನಿರ್ಬಂಧ(ಕ್ವಾರೆಂಟೈನ್)ದಲ್ಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷದ ಮುಖ್ಯ ಕಾರ್ಯಕರ್ತರು ಮತ್ತು ಕಲ್ಯಾಣ್ ಅವರ ವೈಯಕ್ತಿಕ ಸಿಬ್ಬಂದಿಯಲ್ಲಿ ಹಲವರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಹೀಗಾಗಿ ವೈದ್ಯರ ಸಲಹೆಯ ಮೇರೆಗೆ ಅವರು ಕ್ವಾರೆಂಟೈನ್​ಗೆ ಒಳಗಾಗಿದ್ದಾರೆ ಎಂದು ಅಭಿಮಾನಿಗಳಿಗೆ ತಿಳಿಸಲಾಗಿದೆ.

"ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಅವರ ಮುಖ್ಯ ಕಾರ್ಯನಿರ್ವಾಹಕರು, ಭದ್ರತೆ ಮತ್ತು ವೈಯಕ್ತಿಕ ಸಿಬ್ಬಂದಿಗಳಲ್ಲಿ ಬಹುತೇಕರು ಕಳೆದ ವಾರ ಕರೋನಾಗೆ ಒಳಗಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ, ಪವನ್ ಕಲ್ಯಾಣ್ ವೈದ್ಯರ ಸಲಹೆಯ ಮೇರೆಗೆ ಕ್ವಾರೆಂಟೈನ್​​ಗೆ ಒಳಗಾಗಿದ್ದಾರೆ. ಆದಾಗ್ಯೂ, ಅವರು ದೈನಂದಿನ ಕಾರ್ಯಗಳು ಮತ್ತು ಪಕ್ಷದ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ. ಅವರು ಪಕ್ಷದ ಮುಖಂಡರೊಂದಿಗೆ ಟೆಲಿಕಾನ್ಫರೆನ್ಸ್​ ಮೂಲಕ ಮಾತನಾಡುತ್ತಿದ್ದಾರೆ” ಎಂದು ಜನಸೇನಾ ಪಕ್ಷದ ಪಿ.ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net