ಅಗ್ನಿ ಅವಘಡದಲ್ಲಿ ಗಾಯಗೊಂಡ ಮಗನಿಗೆ ಮೋದಿ ಸಹಾಯ; ಕೃತಜ್ಞತೆ ತಿಳಿಸಿದ ಪವನ್​ ಕಲ್ಯಾಣ್​| Modi

pavan
Published on

Modi | ಪವನ್ ಕಲ್ಯಾಣ್ ಅವರ ಪುತ್ರ ಮಾರ್ಕ್ ಶಂಕರ್ ಇತ್ತೀಚೆಗೆ ಅಗ್ನಿ ಅವಘಡಕ್ಕೆ ಒಳಗಾಗಿ ತೀವೃ ಆಘಾತ ಎದುರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹಾಯ ಮಾಡಿದ್ದರು. ಇನ್ನೂ ಕಷ್ಟದ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿಯವರು ಸಹಾಯ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿಗೆ ಪವನ್ ಕಲ್ಯಾಣ್ ಅವರು ಈಗ ಧನ್ಯವಾದ ಅರ್ಪಿಸಿದ್ದಾರೆ.

ಸಿಂಗಾಪುರದಲ್ಲಿ ಸಂಭವಿಸಿದ ಈ ಘಟನೆಯಿಂದ 8 ವರ್ಷದ ಮಾರ್ಕ್​ ಶಂಕರ್​ಗೆ ಸುಟ್ಟ ಗಾಯಗಳಾದವು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭದಲ್ಲಿ ಪವನ್ ಕಲ್ಯಾಣ್ ಕುಟುಂಬಕ್ಕೆ ನರೇಂದ್ರ ಮೋದಿ ಸಹಾಯ ಮಾಡಿದ್ದರು. ಹಾಗಾಗಿ ಇದೀಗ ಪವನ್ ಕಲ್ಯಾಣ್ ಸೋಶಿಯಲ್ ಮೀಡಿಯಾ ಮೂಲಕ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

ಮೋದಿಗೆ ಕೃತಜ್ಞತೆ ತಿಳಿಸಿದ ಪವನ್​ ಕಲ್ಯಾಣ್​ ?

ನನ್ನ ಮಗ ಮಾರ್ಕ್ ಶಂಕರ್ ಸಿಂಗಾಪುರದ ಬೇಸಿಗೆ ಶಿಬಿರದಲ್ಲಿ ಇದ್ದಾಗ ಅಗ್ನಿ ಅವಘಡ ಸಂಭವಿಸಿತು. ಆ ವೇಳೆ ಸಹಾಯ ಮಾಡಿದ್ದಕ್ಕಾಗಿ ಪ್ರಧಾನ ಮಂತ್ರಿ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಈ ಕಷ್ಟದ ಸಂದರ್ಭದಲ್ಲಿ ಸಿಂಗಾಪುರದಲ್ಲಿ ಇರುವ ಭಾರತೀಯ ರಾಯಭಾರಿ ಕಚೇರಿ ಕೂಡ ಸ್ಪಂದಿಸಿತು ಎಂದು ಪವನ್ ಕಲ್ಯಾಣ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸಿಂಗಾಪುರದ ಬೇಸಿಗೆ ಶಿಬಿರದಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ ತಮ್ಮ ಮಗ ಮಾರ್ಕ್ ಶಂಕರ್ ಈಗ  ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದ್ದಾರೆ.

ಸಿಂಗಾಪುರದಲ್ಲಿ ನಡೆದ ದುರದೃಷ್ಟಕರ ಘಟನೆಯ ನಂತರ ನನ್ನ ಮಗ ಶಂಕರ್ ಆರೋಗ್ಯವಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ. ಅವನು ಚೇತರಿಸಿಕೊಳ್ಳುವಂತೆ ಪ್ರಾರ್ಥನೆ, ಕಾಳಜಿ ಮತ್ತು ಬೆಂಬಲ ನೀಡಿದ ಎಲ್ಲರಿಗೂ ನಾನು ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ ಎಂದು ಪವನ್ ಕಲ್ಯಾಣ್ 'X' ನಲ್ಲಿ ಪೋಸ್ಟ್‌ ಮಾಡಿ ತಿಳಿಸಿದ್ದಾರೆ.

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net