ಒಟಿಟಿಗೆ ಲಗ್ಗೆಯಿಟ್ಟ ಪವನ್​ ಕಲ್ಯಾಣ್​ ನಟನೆಯ 'ಬ್ರೋ'

Untitled design (69)
Published on

ಆಂಧ್ರಪ್ರದೇಶ: ಟಾಲಿವುಡ್​ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಸುಪ್ರೀಮ್ ಹೀರೋ ಸಾಯಿ ಧರಮ್ ತೇಜ್ ನಟನೆಯ ತೆಲುಗು ಚಿತ್ರ 'ಬ್ರೋ' ಜುಲೈ 28, 2023 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಸದ್ಯ ಥಿಯೇಟರ್​ಗಳಲ್ಲಿ ಅಭಿಮಾನಿಗಳನ್ನು ರಂಜಿಸಿದ ಈ ಸಿನಿಮಾ ಇದೀಗ ಒಟಿಟಿ ವೇದಿಕೆಯಲ್ಲೂ ಮನರಂಜಿಸಲು ಮುಂದಾಗಿದೆ.

ಸಮುದ್ರಕನಿ ನಿರ್ದೇಶನದ 'ಬ್ರೋ' ಸಿನಿಮಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಹಿಂದೆಯೇ ಚಿತ್ರತಂಡ ಘೋಷಿಸಿದಂತೆ ಚಿತ್ರವು ಒಟಿಟಿಯಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್​ ಆಗಲಿದೆ ಎಂದು ತಿಳಿಸಿತ್ತು. ಅದರಂತೆಯೇ ಈಗ ನೆಟ್‌ಫ್ಲಿಕ್ಸ್‌ನಲ್ಲಿ ಚಿತ್ರವನ್ನು ಸ್ಟ್ರೀಮಿಂಗ್‌ ಮಾಡಲಾಗಿದೆ.

ಬ್ರೋ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಲು ಸಾಧ್ಯವಾಗದ ಪ್ರೇಕ್ಷಕರಿಗೆ ಇದೀಗ ಚಿತ್ರವು ನೆಟ್​ಫ್ಲಿಕ್ಸ್​ನಲ್ಲಿ​ ಲಭ್ಯವಿದೆ. ಚಿತ್ರದಲ್ಲಿ ಪವನ್​ ಕಲ್ಯಾಣ್​​​ಗೆ ನಾಯಕಿಯಾಗಿ ಕೇತಿಕಾ ಶರ್ಮಾ ನಟಿಸಿದ್ದಾರೆ. ಪ್ರಿಯಾ ಪ್ರಕಾಶ್, ಬ್ರಹ್ಮಾನಂದಂ, ರೋಹಿಣಿ, ವೆನ್ನೆಲ ಕಿಶೋರ್, ರಾಜಾ ಚೆಂಬೋಲು ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net