ಪವನ್​ ಕಲ್ಯಾಣ್​ಗೆ ಹೈಕೋರ್ಟ್​ ಶಾಕ್​ ! ಸರ್ಕಾರಿ ಹಣದಲ್ಲಿ ವೀರಮಲ್ಲು ಚಿತ್ರ ಪ್ರಚಾರ, ತನಿಖೆ ನಡೆಸಲು ಮುಂದಾದ ಸಿಬಿಐ | Pawan Kalyan

Pavan Kalyan vvani
Published on

Pawan Kalyan: ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಪವನ್​ ಕಲ್ಯಾಣ್​​ಗೆ ಹೈಕೋರ್ಟ್ ಆಘಾತ ಸುದ್ಧಿ ನೀಡಿದೆ. ಇವರು ತಮ್ಮ ಹರಿ ಹರ ವೀರಮಲ್ಲು ಚಿತ್ರದ ಪ್ರಚಾರಕ್ಕಾಗಿ ಸರ್ಕಾರಿ ಹಣ ದುರುಪಯೋಗ ಪಡೆದುಕೊಂಡಿದ್ದಾರೆ ಎಂಬ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಕೋರಿದ್ದು, ಅವರು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್​ ವಿಚಾರಣೆಗೆ ಸ್ವೀಕರಿಸಿದೆ. ಪ್ರಕರಣದಲ್ಲಿ ಸಿಬಿಐ, ಎಸಿಬಿ ಪ್ರತಿವಾದಗಳನ್ನು ಮಂಡಿಸಲು ಆದೇಶ ಹೊರಡಿಸಿದ್ದು, ಪ್ರಾಥಮಿಕ ವಿಚಾರಣೆಗೂ ಮುನ್ನ ನೋಟಿಸ್​ ಜಾರಿ ಮಾಡಬೇಕೆಂಬ ಅರ್ಜಿದಾರರ ಕೋರಿಕೆಯನ್ನು ಹೈಕೋರ್ಟ್​ ತಿರಸ್ಕರಿಸಿದೆ.

ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾಗ ತಮ್ಮ ಹರಿ ಹರ ವೀರಮಲ್ಲು ಚಿತ್ರದ ಪ್ರಚಾರವನ್ನು ಸರ್ಕಾರಿ ನಿಧಿಯಿಂದ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿ ಮಾಜಿ ಐಐಎಸ್​ ಅಧಿಕಾರಿ ವಿಜಯ್​ ಕುಮಾರ್​ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಈ ಅರ್ಜಿಯಲ್ಲಿ ಅವರು, ಸಾರ್ವಜನಿಕ ಪ್ರತಿನಿಧಿಯಾಗಿದ್ದಾಗ ತಮ್ಮ ಸಿನಿಮಾದ ಪ್ರಚಾರ ಮತ್ತು ಸಂಗ್ರಹ ಹಾಗೂ ಲಾಭಕ್ಕಾಗಿ ಸಿನಿಮಾ ಟಿಕೆಟ್​ಗಳ ಬೆಲೆಯನ್ನುಹೆಚ್ಚಿಸುವತ್ತ ಗಮನಹರಿಸಿದ್ದಾರೆ. ಇನ್ನು ಬೆಲೆ ಏರಿಕೆಗೆ ಸಂಬಂಧಿಸಿದ ಫೈಲ್​ ಅನ್ನುಸ್ವತಃ ಪ್ರಕ್ರಿಯೆಗೊಳಿಸಿರುವುದಾಗಿ ಮತ್ತು ಇದು ಅವರ ಸ್ವಂತ ಚಿತ್ರವಾಗಿರುವುದರಿಂದ,ಅಧಿಕಾರ ದುರುಪಯೀಓಗ ಪಡೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಚಲನಚಿತ್ರಗಳೇ ಜೀವನೋಪಾಯ ಎಂದು ಹೇಳುವ ಪವನ್​ ಕಲ್ಯಾಣ್​, ಭಾರತ ಸರ್ಕಾರ ನೀಡಿರುವ ನೀತಿ ಸಂಹಿತೆಯನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಸಚಿವ ಹುದ್ದೆಯನ್ನು ವಹಿಸಿಕೊಳ್ಳುವ ಮೊದಲು ಇನ್ನಿತರ ಆದಾಯದ ಮೂಲಗಳಲ್ಲಿ ಭಾಗಿಯಾಗಬಾರದು ಎಂಬ ನಿಯಮ ಪವನ್​ ಕಲ್ಯಾಣ್​ಗೆ ಗೊತ್ತಿಲ್ಲವೇ? ಇನ್ನು ಆದಾಯಕ್ಕಾಗಿ ಚಲನಚಿತ್ರಗಳಲ್ಲಿ ನಟಿಸುತ್ತೇನೆ ಎಂದು ಹೇಳಿದ್ದ ಪವನ್​ ಕಲ್ಯಾಣ್​ ತನ್ನ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ವಿಜಯ್​ಕುಮಾರ್​ ಅರ್ಜಿಯಲ್ಲಿ ತಿಳಿಸಿದ್ದಾರೆ.

ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಪ್ರಕಾರ, ಸಾರ್ವಜನಿಕ ಪ್ರತಿನಿಧಿಯಾಗಿರುವ ವ್ಯಕ್ತಿಯೊಬ್ಬರು ವೈಯಕ್ತಿಕ ಲಾಭಕ್ಕಾಗಿ ಇಂತಹ ಕೆಲಸಗಳನ್ನು ಮಾಡುವುದು ಅಪರಾಧ ಎಂದು ವಿಜಯ್ ಕುಮಾರ್ ಆರೋಪಿಸಿದ್ದಾರೆ. ಸಾರ್ವಜನಿಕ ಪ್ರತಿನಿಧಿ ಮತ್ತು ಸಚಿವರಾಗಿರುವಾಗ ನಿಯಮಗಳನ್ನು ಉಲ್ಲಂಘಿಸಿ, ಅಧಿಕಾರ ಹಾಗೂ ಸರ್ಕಾರಿ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಂಡಿದ್ದ ಪವನ್​ ಕಲ್ಯಾಣ್​ ಅವರಿಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಎಸಿಬಿ ಡಿಜಿಗೆ ಪತ್ರ ಬರೆದಿದ್ದು, ಅವರು ಕ್ರಮ ಕೈಗೊಳ್ಳದಿದ್ದಾಗ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ವಿಚಾರದ ಬಗ್ಗೆ ವಿಚಾರಣೆ ಸ್ವೀಕರಿಸಿದ ಹೈಕೋರ್ಟ್​, ಸಿಬಿಐ ಮತ್ತು ಎಸಿಬಿ ವಕೀಲರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲು ರಿಜಿಸ್ಟರ್​ಗೆ ಆದೇಶಿಸಿದ್ದಾರೆ. ಇನ್ನು ಪವನ್​ ಕಲ್ಯಾಣ್​ ಮೇಲಿರುವ ಆರೋಪಗಳನ್ನು ಹೈಕೋರ್ಟ್​ ಉಲ್ಲೇಖಿಸಿದ್ದು, ಈ ವಿಚಾರದ ಬಗ್ಗೆ ಸಿಬಿಐಗೆ ತನಿಖೆ ನಡೆಸುವಂತೆ ಸೂಚಿಸಿದ್ದು, ಈ ಅರ್ಜಿ ವಿಚಾರಣೆಯನ್ನು ಒಂದು ವಾರದ ವರೆಗೆ ಮುಂದೂಡಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net