ಮುದ್ದಿನ ನಾಯಿಗಾಗಿ ಬಾಯ್​ಫ್ರೆಂಡ್​​ನಿಂದ ದೂರವಾದ Pavi Poovappa! 5 ವರ್ಷದ ಸಂಬಂಧಕ್ಕೆ ಎಳ್ಳು ನೀರು

Pavi Poovappa
Published on

Pavi Poovappa:  ಬಿಗ್ ಬಾಸ್ ಸೀಸನ್ 10 ಸ್ಪರ್ಧಿಯಾಗಿದ್ದ ಮಾಡಲ್ ಹಾಗೂ  ಇನ್‌ಫ್ಲೂಯನ್ಸರ್‌ ಪವಿ ಪೂವಪ್ಪ ಇದೀಗ ಬಾಯ್‌ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡಿದ್ದಾರೆ. 5 ವರ್ಷದ ಸಂಬಂಧವನ್ನು ದೂರ ಮಾಡಿಕೊಳ್ಳಲು ಕಾರಣ ಏನೆಂದರು ರಿವೀಲ್ ಮಾಡಿದ್ದಾರೆ.

ಬಾಯ್‌ಫ್ರೆಂಡ್‌ ಜನಪ್ರಿಯ ಡಿಜೆ ಮ್ಯಾಡಿ ಎಂದು  ಐರ್‌ಲ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಲಾಂಗ್‌ ಡಿಸ್ಟೆನ್ಸ್‌ ರಿಲೇಷನ್‌ಶಿಪ್‌ನಲ್ಲಿದ್ದರು. ನಾವಿಬ್ಬರು ಮದುವೆಯಾಗುತ್ತೀವಿ ಎಂದು ಪವಿ ಹೇಳುತ್ತಿದ್ದರು. ಇದ್ದಕ್ಕಿದ್ದಂತೆ ಬ್ರೇಕಪ್ ಮಾಡಿಕೊಳ್ಳಲು ಕಾರಣ ಏನು ಎಂದು ರಿವೀಲ್ ಮಾಡಿದ್ದಾರೆ.

'ಬಾಯ್‌ಫ್ರೆಂಡ್‌ ಬಗ್ಗೆ ರಿವೀಲ್ ಆಗಿತ್ತು. ಈಗ ಬ್ರೇಕಪ್ ಆಗಿದೆ. 5 ವರ್ಷಗಳಿಂದ ನನ್ನ ಜೊತೆಯಲ್ಲಿದ್ದರು ಪ್ರತಿಯೊಂದು ಚೆನ್ನಾಗಿತ್ತು ನಮ್ಮಿಬ್ಬರು ನಡುವೆ ಒಳ್ಳೆ ಹೊಂದಾಣಿಕೆ ಇತ್ತು. ಅವರಿಗೆ ನನ್ನ ನಾಯಿ ಬಗ್ಗೆ ಸಮಸ್ಯೆ ಶುರುವಾಯ್ತು. ಮದುವೆಯಾದ ಮೇಲೆ ನಾಯಿಯನ್ನು ಬಿಡುವುದಿಲ್ಲ ಮನೆಯಲ್ಲಿ ಅಂದ್ರು...ಸಣ್ಣ ಪುಟ್ಟ ವಿಚಾರಗಳಿಗೆ ಕಾರಣ ಕೊಡಲು ಶುರು ಮಾಡಿದ್ದರು ಹೀಗಾಗಿ ನಾನೇ ಹಿಂದೆ ಸರಿದರೆ ಒಳ್ಳೆಯದಾಗುತ್ತದೆ ಎಂದು ಹೊರ ಬಂದೆ ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಪವಿ ಮಾತನಾಡಿದ್ದಾರೆ.

'5 ನಿಮಿಷಗಳ ವಿಡಿಯೋವನ್ನು ನೋಡಿ ದಯವಿಟ್ಟು ಯಾರ ಬಗ್ಗೆನೂ ಜಡ್ಜ್ ಮಾಡಬೇಡಿ. ಬ್ರೇಕಪ್ ಮಾಡಿಕೊಳ್ಳಲು ನಾಯಿ ಒಂದೇ ಕಾರಣ ಅಲ್ಲ.  ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಗೊತ್ತಿದೆ.  ನಾನು ಏನು ಎದುರಿಸುತ್ತಿದ್ದೀನಿ ಅನ್ನೋದು ನನಗೆ ಗೊತ್ತಿದೆ. ಸಂಬಂಧಗಳಲ್ಲಿ ನಿಯತ್ತು ಇರಬೇಕು ಆದರೆ ಅದರಲ್ಲಿ ನಾನು ವಿಫಲವಾಗಿದ್ದೀನಿ' ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ಗೆ ಪವಿ ಕಾಮೆಂಟ್ ಮಾಡುವ ಮೂಲಕ ಮತ್ತಷ್ಟು ಸ್ಪಷ್ಟನೆ ನೀಡಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net