ವಿಮಾನದಲ್ಲಿ ಇತರ ಪ್ರಯಾಣಿಕರ ಮುಂದೆಯೇ ಮಲ, ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ...

plane in sky
Published on

ಮುಂಬೈ: ವಿಮಾನದಲ್ಲಿ ಇತರ ಪ್ರಯಾಣಿಕರ ಮುಂದೆಯೇ ನೆಲಹಾಸಿನ ಮೇಲೆ ಮಲ, ಮೂತ್ರ ವಿಸರ್ಜನೆ ಮಾಡಿರುವ ವ್ಯಕ್ತಿಯೊರ್ವನನ್ನು ಬಂಧಿಸಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಇಂದು ನಾಡಪ್ರಭು ಕೆಂಪೇಗೌಡ ಜಯಂತಿ; ವಿವಿಧ ನಾಯಕರಿಂದ ಪುಷ್ಪಾರ್ಚನೆ, ಗೌರವ ಸಲ್ಲಿಕೆ

ಬಂಧಿತನನ್ನು ರಾಮ್​ಸಿಂಗ್ ಎಂದು ಗುರುತಿಸಲಾಗಿದ್ದು, ಜೂನ್​ 24ರಂದು ಮುಂಬೈ-ದೆಹಲಿ ಏರ್ ಇಂಡಿಯಾ ವಿಮಾನ ಆಕಾಶದಲ್ಲಿದ್ದ ವೇಳೆ ಈ ಘಟನೆ ಸಂಭವಿಸಿದೆ. 

ವಿಮಾನದ 9ನೇ ಸಾಲಿನ, 17 ಎಫ್‌ ಸೀಟಿನಲ್ಲಿ ಕುಳಿತಿದ್ದ ರಾಮ್​​ಸಿಂಗ್​ ಮಲ, ಮೂತ್ರ ವಿಸರ್ಜನೆ ಮತ್ತು ಉಗುಳಿದ್ದಾನೆ ಎಂದು ಆತನ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಈತನ ನೀಚ ಕೃತ್ಯವು ಹಲವಾರು ಪ್ರಯಾಣಿಕರನ್ನು ಕೆರಳಿಸಿದ್ದು, ಕೂಡಲೇ ಕ್ಯಾಬಿನ್ ಸಿಬ್ಬಂದಿ ಪ್ರಯಾಣಿಕನಿಗೆ ಮೌಖಿಕ ಎಚ್ಚರಿಕೆ ನೀಡಿ ಇತರರಿಂದ ಪ್ರತ್ಯೇಕಿಸಿದ್ದಾರೆ.

ಇದನ್ನೂ ಓದಿ: ನಮ್ಮ ಬೇಡಿಕೆಗಳನ್ನೂ ಪೂರೈಸಿ! ಅಂಗನವಾಡಿ ಕಾರ್ಯಕರ್ತೆಯರಿಂದ ಹೋರಾಟ…

ತಕ್ಷಣವೇ ಪೈಲಟ್​​ ರಾಮ್​ಸಿಂಗ್​ನ ದುರ್ನಡತೆಯ ಹಾಗೂ ನಡೆದ ಘಟನೆ ಬಗ್ಗೆ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದು, ವಿಮಾನ ಬಂದಿಳಿದ ಕೂಡಲೇ ಆತನನ್ನು ಬಂಧಿಸಿ ಕರೆದೊಯ್ಯಲಾಗಿದೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು) ಮತ್ತು 510 (ಕುಡಿತದ ವ್ಯಕ್ತಿಯಿಂದ ಸಾರ್ವಜನಿಕವಾಗಿ ದುರ್ವರ್ತನೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net