ನಿಂತಿದ್ದ ಗೂಡ್ಸ್​ ಟ್ರೈನ್​ಗೆ ಪ್ಯಾಸೆಂಜರ್​ ಡಿಕ್ಕಿ: 5 ಜನರು ಮೃತ, ಹಲವರಿಗೆ ಗಂಭೀರ ಗಾಯ!

Bbau - 2025-11-04T174923.303
Published on

ಛತ್ತಿಸ್​ಗಢ: ಪ್ರಯಾಣಿಕರ ರೈಲು ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 5 ಜನರು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾದ ಘಟನೆ ಛತ್ತಿಸ್​​ಘಡದ ಬಿಲಾಸ್​ಪುರ ಜಿಲ್ಲೆಯಲ್ಲಿ ಮಂಗಳವಾರ(ನ.04) ನಡೆದಿದೆ.

ಬಿಸ್ಲಾಪುರ-ಕಟ್ನಿ ವಿಭಾಗದಲ್ಲಿ ಕೊರ್ಬಾ ಪ್ಯಾಸೆಂಜರ್​ ರೈಲು, ಲಾಲ್​​ ಕದನ್​ ಪ್ರದೇಶದ ಬಳಿ ನಿಂತಿದ್ದ ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದಿದೆ. ಇನ್ನು‘ ಡಿಕ್ಕಿಯ ಪರಿಣಾಮ ಎಷ್ಟು ಪ್ರಬಲವಾಗಿತ್ತೆಂದರೆ ಕೆಲವು ಬೋಗಿಗಳು ಒಂದರ ಮೇಲೊಂದು ಹತ್ತಿವೆ. ಪ್ರಯಾಣಿಕರು ಮತ್ತು ಹತ್ತಿರದ ಸ್ಥಳೀಯರಲ್ಲಿ ಭಯಭೀತರಾಗಿದ್ದರು ಎಂದು ವರದಿ ಆಗಿದೆ.

ಈ ಆಡಚರಣೆಯಿಂದ ಹಲವು ರೈಲುಗಳು ರದ್ದುಗೊಳಿಸಲಾಗಿದೆ. ಎನ್​ಡಿಆರ್​ಎಫ್​ ತಂಡ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗಳುಗಳನ್ನು ಆಸ್ಪತ್ರೆ ದಾಖಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘರ್ಷಣೆಗೆ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಮತ್ತು ಹಾನಿಗೊಳಗಾದ ಭಾಗವನ್ನು ತೆರವುಗೊಳಿಸಿ ಸಂಚಾರವನ್ನು ಪುನರಾರಂಭಿಸಲು ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net