ಒಂದು ಪ್ಯಾಕೆಟ್​​ ಪಾರ್ಲೆ ಜಿ ಬೆಲೆ 370 ರೂ.! ಬೆಚ್ಚಿಬಿದ್ದ ಭಾರತೀಯರು.. parle g

parle-g-biscuits
Published on

parle g : ಭಾರತೀಯರು ಎಲ್ಲಿಗೆ ಹೋದರೂ ತಮ್ಮ ಆಹಾರದ ರುಚಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆ. ಅದಕ್ಕಾಗಿಯೇ ಭಾರತೀಯ ಉತ್ಪನ್ನಗಳು ವಿದೇಶಗಳಲ್ಲಿಯೂ  ಲಭ್ಯವಿದೆ. ಆದರೆ ನಮ್ಮ ಭಾರತೀಯ ಆಹಾರಗಳು ವಿದೇಶದಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ. ಈ ಕುರಿತಾದ ಒಂದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಅಮೆರಿಕದಲ್ಲಿ ಪಾರ್ಲೆ ಜಿ ಬೆಲೆ ಎಷ್ಟು?

ಅಮೆರಿಕದ ಡಲ್ಲಾಸ್ ನಗರದ ವಾಲ್‌ಮಾರ್ಟ್ ಅಂಗಡಿಯೊಂದರಲ್ಲಿ ಭಾರತೀಯರೊಬ್ಬರು ಭಾರತೀಯ ಉತ್ಪನ್ನಗಳು ಮತ್ತು ಅವುಗಳ ಬೆಲೆಗಳನ್ನು ತೋರಿಸುತ್ತಾರೆ. ಇವುಗಳಲ್ಲಿ ಬೆಳೆ, ಹೆಸರುಕಾಳು, ನಾಮ್ಕೀನ್, ಅಲುಬುಜಿಯಾ, ಪಾರ್ಲೆ-ಜಿ, ಹೈಡ್ ಅಂಡ್ ಸೀಕ್ ಬಿಸ್ಕತ್ತುಗಳು ಮತ್ತು ಗುಡ್ ಡೇ ಬಿಸ್ಕತ್ತುಗಳನ್ನುತೋರಿಸುತ್ತಾರೆ.

ಇದನ್ನೂ ಓದಿ‘ಯೆಮನ್‌’ ರಾಜಧಾನಿ ಮೇಲೆ ವೈಮಾನಿಕ ದಾಳಿ ಮಾಡಿದ ‘ಇಸ್ರೇಲ್‌’; ಇಬ್ಬರು ಸಾವು| airstrikes ವೀಡಿಯೊದ ಪ್ರಕಾರ, ಬೇಳೆ ಮತ್ತು ಹೆಸರುಕಾಳು ಬೆಲೆ ಸುಮಾರು $4. ಅಂದರೆ ಭಾರತೀಯ ಕರೆನ್ಸಿಯಲ್ಲಿ ರೂ.330. ಹಲ್ದಿರಾಮ್ ನಾಮ್ಕೀನ್ ಕೂಡ ಅದೇ ಬೆಲೆಯಲ್ಲಿದೆ. ಪಾರ್ಲೆ-ಜಿ ಬಿಸ್ಕತ್ತುಗಳು ಮತ್ತು ಹೈಡ್ ಅಂಡ್ ಸೀಕ್ ಬಿಸ್ಕತ್ತುಗಳು $4.5. ಅಂದರೆ ಸುಮಾರು ರೂ.370. ಭಾರತದಲ್ಲಿ ರೂ.20 ಕ್ಕೆ ಲಭ್ಯವಿರುವ ಬಿಸ್ಕತ್ತು ಅಲ್ಲಿ ದುಪ್ಪಟ್ಟು  ಬೆಲೆಗೆ ಮಾರಾಟವಾಗುತ್ತಿದೆ. ನಾವು ಭಾರತದಲ್ಲಿ ಉತ್ತಮವಾಗಿದ್ದೇವೆ, ಇಲ್ಲಿ ಉತ್ಪನ್ನಗಳು ತುಂಬಾ ದುಬಾರಿಯಾಗಿದೆ ಎಂದು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ.

ವಿದೇಶಗಳಲ್ಲಿ ಭಾರತೀಯ ಉತ್ಪನ್ನಗಳು ದುಬಾರಿಯಾಗಲು ಕಾರಣ:

ಸಾರಿಗೆ ವೆಚ್ಚಗಳು, ಕಸ್ಟಮ್ಸ್ ಸುಂಕಗಳು ಹಾಗೂ ಅಲ್ಲಿ ವಾಸಿಸುವ ಭಾರತೀಯರಿಂದ ಹೆಚ್ಚಿನ ಬೇಡಿಕೆ ಇರುವ ಕಾರಣಗಳಿಂದಾಗಿ ವಿದೇಶಗಳಲ್ಲಿ ಭಾರತೀಯ ಉತ್ಪನ್ನಗಳು ದುಬಾರಿಯಾಗಿವೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net