ಪಾರ್ಕ್ ಜಾಗ ವಿವಾದ ತಾರಕಕ್ಕೆ

park
ಜ್ಯೋತಿ ನಗರ ಪಾರ್ಕ್ ಜಾಗಕ್ಕೆ ಸಂಬಂಸಿ ಎಸ್.ಎನ್.ಚನ್ನಬಸಪ್ಪ ಸ್ಥಳಕ್ಕೆ ತೆರಳಿ ಸ್ಥಳೀಯರೊಂದಿಗೆ ಚರ್ಚಿಸಿದರು.
Published on

ಶಿವಮೊಗ್ಗ: ಜ್ಯೋತಿ ನಗರದಲ್ಲಿರುವ ಪಾರ್ಕ್ ಜಾಗಕ್ಕೆ ಸಂಬಂಸಿದ ವಿವಾದ ತಾರಕಕ್ಕೇರಿದ್ದು ಶನಿವಾರ ನಗರಪಾಲಿಕೆ ಅಕಾರಿಗಳು, ಶಾಸಕ ಎಸ್.ಎನ್.ಚನ್ನಬಸಪ್ಪ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದರು.

ಈ ಹಿಂದೆ ಪಾಲಿಕೆಯಿಂದ ಅನುದಾನ ಮಂಜೂರಾಗಿ ಪಾರ್ಕ್ ಅಭಿವೃದ್ಧಿಯಾಗಿತ್ತು. ಕೆಲವು ದಿನಗಳ ಹಿಂದೆ ಪಾರ್ಕ್ ಜಾಗ ನಮ್ಮ ಆಸ್ತಿ. ನಮ್ಮ ಬಳಿ ಎಲ್ಲ ದಾಖಲೆಯಿದೆ ಎಂದು ಆಸ್ತಿ ಮಾಲೀಕರು ಹಕ್ಕು ಮಂಡಿಸಿದ್ದರು. ಈಗ ಪಾಲಿಕೆಯಿಂದ ಪಾರ್ಕ್‌ನಲ್ಲಿ ಅಳವಡಿಸಿದ್ದ ಕೆಲ ಉಪಕರಣಗಳನ್ನು ತೆರವುಗೊಳಿಸಿ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ತುಂಗಾನಗರ ಪೊಲೀಸರು ಭೇಟಿ ನೀಡಿ ಜೆಸಿಬಿ ವಶಕ್ಕೆ ಪಡೆದರು. ಪಾಲಿಕೆ ಹಾಗೂ ಆಸ್ತಿಯ ಮಾಲೀಕರು ಎಂದು ಹೇಳಿಕೊಳ್ಳುವವರ ನಡುವೆ ವಿವಾದ ತಾರಕಕ್ಕೇರಿದ್ದು, ಇನ್ನಷ್ಟೇ ನೈಜ ಮಾಲೀಕತ್ವ ಯಾರದ್ದು ಎಂಬುದು ದೃಢಪಡಬೇಕಿದೆ. ಈ ಮಧ್ಯ ಪಾರ್ಕ್ ಜಾಗವನ್ನು ಪಾಲಿಕೆ ಆಸ್ತಿಯಾಗಿಯೇ ಉಳಿಸಿಕೊಳ್ಳಬೇಕೆಂದು ಅಲ್ಲಿನ ನಿವಾಸಿಗಳು ಪಾಲಿಕೆ ಅಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net