ಹೆಣ್ಣು ಮಕ್ಕಳ ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ

Published on

ಬೆಂಗಳೂರು
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಾಗರಬಾವಿಯ ಬೆಂಗಳೂರು ಬ್ಲೇಜ್ ಹೆಣ್ಣು ಮಕ್ಕಳ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ, ಪರಿಸರ ವಿಜ್ಞಾನ ಕೇಂದ್ರದ ಸಂಶೋಧಕರು ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ನಾಗರೀಕರ ಜವಾಬ್ದಾರಿ ಕುರಿತು ಜಾಗೃತಿ ಮೂಡಿಸಿದರು.
ಇದೇ ವೇಳೆ ಕರೆಗಳ ರಕ್ಷಣೆ ಹಾಗೂ ಅದರಿಂದಾಗುವ ಉಪಯೋಗಗಳ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಲಾಯಿತು. ಜೊತೆಗೆ ಸಂಶೋಧಕ ಡಾ. ಟಿ.ವಿ. ರಾಮಚಂದ್ರ ಅವರು, ಸಮಗ್ರ ಶಕ್ತಿ ಯೋಜನೆ, ಭೂ ಮತ್ತು ಜಲಚರ ಪರಿಸರ ವ್ಯವಸ್ಥೆಗಳ ಸಂರಕ್ಷಣೆ, ಪರಿಸರ ಮಾದರಿ ರಚನೆ, ಮಣ್ಣು ಮತ್ತು ಜಲಮಾಲಿನ್ಯ, ಪುರಸಭೆಯ ಘನ ತ್ಯಾಜ್ಯ ನಿರ್ವಹಣೆ ಸೇರಿ ಪರಿಸರ ರಕ್ಷಣೆ, ಗಿಡ ಮರಗಳ ಮಹತ್ವ ಮತ್ತು ಉಪಯೋಗ, ಕೃಷಿ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು.
ಸಂಶೋಧಕ ಎಂ.ವಿ. ವ್ರಿಜುಲಾಲ್ ಮಾತನಾಡಿ, ವಿವಿಧ ಪಕ್ಷಿಗಳ ಮಾಹಿತಿ ನೀಡಿದರು. ಪಕ್ಷಿಸಂಕುಲ ಹಾಗೂ ಮಾನವರ ಉಳಿವಿಗೆ ಅರಣ್ಯ ಮತ್ತು ಜಲ ಸಂಪತ್ತಿನ ಉಳಿವಿನ ಅಗತ್ಯತೆ ಕುರಿತು ವಿವರಿಸಿದರು.
ತುಲಿಕ ಮಂಡಲ್ ಅವರು ಗ್ರೂಗಲ್ ಆರ್ಥ್ ಆ್ಯಪ್ ಮೂಲಕ ಪರಿಸರ ಮಾಲಿನ್ಯಕ್ಕೆ ಕಾರಣ, ಮಾಲಿನ್ಯದ ಪ್ರಮಾಣ ಹಾಗೂ ಪರಿಸರ ಸಂರಕ್ಷಣೆ ಕುರಿತು ತಿಳುವಳಿಕೆ ನೀಡಿದರು.
ಗಗನ, ವಿ. ಸೆನ್ಸಿ, ಕೆ.ಎಸ್. ಅಸುಲಭ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net