

ಪ್ಯಾರಿಸ್: ಇತ್ತೀಚಿನ ದಿನಗಳಲ್ಲಿ ಫ್ರಾನ್ಸ್ ರಾಜಧಾನಿಯಲ್ಲಿ ರಕ್ತ ಹೀರುವ ತಿಗಣೆ ಕಾಟ ಹೆಚ್ಚಾಗಿದೆ. ಮನೆಗಳು, ಚಿತ್ರಮಂದಿರಗಳು, ಆಸ್ಪತ್ರೆಗಳು, ಮೆಟ್ರೋ ರೈಲುಗಳು, ಚಾರ್ಲ್ಸ್ ಡಿ ಗೌಲ್ಲೆ ಏರ್ಪೋರ್ಟ್ನಲ್ಲೂ ಪ್ರಯಾಣಿಕರನ್ನು ಕಾಡುತ್ತಿವೆ..
ಫ್ರಾನ್ಸ್ 2024ರಲ್ಲಿ ಒಲಿಂಪಿಕ್ಸ್ ಆಯೋಜಿಸುತ್ತಿದ್ದು ಪ್ರಪಂಚದೆಲ್ಲೆಡೆಯಿಂದ ಕ್ರೀಡಾಪಟುಗಳು ಆಗಮಿಸಲಿದ್ದಾರೆ. ಇದೇ ಸಮಯದಲ್ಲಿ ಕಾಡುತ್ತಿರುವ ತಿಗಣೆ ಸಮಸ್ಯೆ ಫ್ರೆಂಚ್ ಸರ್ಕಾರಕ್ಕೆ ಕಳವಳದ ವಿಷಯವಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ತಿಗಣೆಯಿಂದ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ಅನೇಕ ವರದಿಗಳಿವೆ. ಪ್ಯಾರಿಸ್ ನಗರದ ಡೆಪ್ಯುಟಿ ಮೇಯರ್ ಇಮಾನ್ಯುವೆಲ್ ಗ್ರೇಗೋಯಿರ್, ತಿಗಣೆಯಿಂದ ಯಾರೊಬ್ಬರೂ ಸುರವಾಗಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ಈ ತಿಗಣೆಗಳ ನಿಮೂರ್ಲನೆಗೆ ಆರೋಗ್ಯ ಕಾರ್ಯಕರ್ತರು, ಅಧಿಕಾರಿಗಳು ಸೇರಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಸಾರಿಗೆ ಸಚಿವ ಕ್ಲೆಮೆಂಟ್ ಬ್ಯೂನ್ ಕೂಡ ಸಾರ್ವಜನಿಕ ಸಾರಿಗೆಯಲ್ಲಿ ತಿಗಣೆ ಹಾವಳಿ ನಿವಾರಣೆಗೆ ಕ್ರಮಕ್ಕೆ ಮುಂದಾಗಿದ್ದಾರೆ.
1950ರ ದಶಕದಲ್ಲಿ ಫ್ರಾನ್ಸ್ನಲ್ಲಿ ತಿಗಣೆಗಳಿಂದ ಇದೇ ರೀತಿ ಸಾಂಕ್ರಾಮಿಕ ರೋಗ ಹರಡಿತ್ತು. ಕೆಲವು ದಿನದಲ್ಲಿ ಅವುಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಿ ಸಮಸ್ಯೆ ಉಂಟಾಗಿತ್ತು. ನಂತರ ಇದ್ದಕ್ಕಿದ್ದಂತೆ ಮನೆಗಳಿಂದ ಕಣ್ಮರೆಯಾಗಿದ್ದವು. ತಿಗಣೆ ಕಚ್ಚುವಿಕೆಯು ಖಿನ್ನತೆ, ಆತಂಕ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ತರು ಹೇಳುತ್ತಾರೆ.
ಫ್ರಾನ್ಸ್ನ ಎರಡು ಶಾಲೆಗಳಲ್ಲಿ ಹೆಚ್ಚಾದ ತಿಗಣೆ ಕಾಟಕ್ಕೆ ರಜೆ ಘೋಷಿಸಿದ್ದಾರೆ. ಮಾರ್ಸೆಲ್ಲೆ ಮತ್ತು ಆಗ್ನೇಯ ಫ್ರಾನ್ಸ್ನ ಲಿಯಾನ್ನ ಹೊರಗಿನ ವಿಲ್ಲೆಫ್ರಾಂಚೆ&ಸುರ್&ಸೌನ್ನಲ್ಲಿರುವ ಶಾಲೆಗಳು. ಸ್ವಚ್ಛತೆಗಾಗಿ ಎರಡೂ ಶಾಲೆಗಳನ್ನು ಹಲವು ದಿನಗಳ ಕಾಲ ಮುಚ್ಚಲಾಗಿತ್ತು ಎಂದು ಸ್ಥಳಿಯ ಅಧಿಕಾರಿಗಳು ತಿಳಿಸಿದ್ದಾರೆ.