ಮೊದಲ ಮಗುವಿಗೆ ಜನ್ಮ ನೀಡಿದ ನಟಿ ಪರಿಣಿತ ಚೋಪ್ರಾ Parineeti Chopra

Parineeti Chopra
Published on

Parineeti Chopra: ನಟಿ ಪರಿಣಿತಾ ಚೋಪ್ರಾ ಮತ್ತು ಸಂಸದ ರಾಘವ್​ ಚಡ್ಡಾ ಮೊದಲ ಗಂಡು ಮಗುವನ್ನು ಸ್ವಾಗತ ಮಾಡಿದ್ದು, ದಂಪತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮೂಲಕ ತೋಳುಗಳು ತುಂಬಿವೆ, ನಮ್ಮ ಹೃದಯಗಳು ತುಂಬಿವೆ ಎಂದು ಬರೆದುಕೊಂಡು ಹರ್ಷವ್ಯಕ್ತಪಡಿಸಿದ್ದಾರೆ.

ಪೋಸ್ಟ್​ನಲ್ಲೇನಿದೆ?

ದಂಪತಿ ತಮ್ಮ ಜಂಟಿ ಇನ್​ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಅವನು ಕೊನೆಗೂ ಬಂದಿದ್ದಾನೆ! ನಮ್ಮ ಗಂಡು ಮಗು ಮತ್ತು ನಮಗೆ ನಮ್ಮ ಹಿಂದಿನ ಜೀವನ ನೆನಪಿಲ್ಲ! ತೋಳುಗಳು ತುಂಬಿವೆ, ಹೃದಯಗಳು ತುಂಬಿವೆ. ಈ ಮೊದಲು ನಾವು ಇಬ್ಬರೇ ಇದ್ದವು ಈಗ ನಮಗೆ ಎಲ್ಲವೂ ದೊರೆತಿದೆ ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

ಹಿನ್ನೆಲೆ

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಈ ವರ್ಷದ ಆಗಸ್ಟ್‌ನಲ್ಲಿ ತಮ್ಮ ಗರ್ಭಧಾರಣೆಯನ್ನು ವಿಶೇಷವಾಗಿ ಅಂದರೆ ತಟ್ಟೆಯಲ್ಲಿ ಪುಟ್ಟ ಮಗುವಿನ ಪಾದಗಳ ವರ್ಣಚಿತ್ರವನ್ನು ಒಳಗೊಂಡ ಹೃದಯಸ್ಪರ್ಶಿ ಪೋಸ್ಟ್ ಮೂಲಕ, ನಮ್ಮ ಪುಟ್ಟ ವಿಶ್ವವು ದಾರಿಯಲ್ಲಿದೆ... ಅಳತೆ ಮೀರಿ ಆಶೀರ್ವಾದ ಎಂಬ ಶೀರ್ಷಿಕೆಯೊಂದಿಗೆ ಘೋಷಿಸಿದರು.

ಈ ಜೋಡಿಯು ಮೇ 13, 2023 ರಂದು ನವದೆಹಲಿಯಲ್ಲಿ ತಮ್ಮ ನಿಶ್ಚಿತಾರ್ಥದೊಂದಿಗೆ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದರು. ನಂತರ ಸೆಪ್ಟೆಂಬರ್ 24, 2023 ರಂದು ಉದಯಪುರದಲ್ಲಿ ಅದ್ದೂರಿಯಾಗಿ ಮದುವೆಯಾದರು. ಈ ಸಮಾರಂಭದಲ್ಲಿ ನಿಕಟ ಕುಟುಂಬ ಮತ್ತು ಚಲನಚಿತ್ರ ಮತ್ತು ರಾಜಕೀಯ ಬಳಗಗಳು ಭಾಗಿಯಾಗಿದ್ದವು. ಅಧೀಕೃತವಾಗಿ ಘೋಷಿಸುವ ಮೊದಲೇ ಈ ಜೋಡಿ ಡೇಟಿಂಗ್​ ಮಾಡುತ್ತಿತ್ತು ಎಂದು ವರದಿಗಳು ಸೂಚಿಸಿವೆ.

ಪರಿಣಿತಿ ಕೊನೆಯ ಬಾರಿಗೆ 'ಅಮರ್ ಸಿಂಗ್ ಚಮ್ಕಿಲಾ' (2024) ನಲ್ಲಿ ದಿಲ್ಜಿತ್ ದೋಸಾಂಜ್ ಜೊತೆ ಕಾಣಿಸಿಕೊಂಡರು, ಅವರು ಪಂಜಾಬಿ ಗಾಯಕನ ಪಾತ್ರವನ್ನು ನಿರ್ವಹಿಸಿದರು. ಈ ಸಂಗೀತ ನಾಟಕವು ಚಮ್ಕಿಲಾ ಮತ್ತು ಅವರ ಪತ್ನಿ ಅಮರ್ಜೋತ್ ಕೌರ್ ಅವರ ದುರಂತ ಪ್ರೇಮ ಕಥೆಯ ಬಗ್ಗೆ ತಿಳಿಸಿತು. ತಾರಾಗಣದಲ್ಲಿ ಅಪಿಂದರ್ದೀಪ್ ಸಿಂಗ್, ಅಂಜುಮ್ ಬಾತ್ರಾ, ನಿಶಾ ಬಾನೋ ಮತ್ತು ಕುಮುದ್ ಮಿಶ್ರಾ ಸೇರಿದಂತೆ ಇತರರು ಇದ್ದರು. ಈ ಚಿತ್ರವು ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net