

ಮುಂಬೈ: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ 7 ತಿಂಗಳ ಹಿಂದೆ ಅಂದ್ರೆ, ಸೆಪ್ಟೆಂಬರ್ 24ರಂದು ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಪರಿಣಿತಿ ಮತ್ತು ರಾಘವ್ ಅವರ ವಿವಾಹ ಅದ್ಧೂರಿಯಾಗಿ ನೆರವೇರಿತ್ತು. ಮದುವೆ ಮೂಲಕವಾಗಿ ಸುದ್ದಿಯಾಗಿದ್ದ ನಟಿ ಈ ಬಾರಿ ಪರಿಣಿತಿ ಈ ಬಾರಿ ಮತ್ತೆ ಚರ್ಚೆಗೆ ಬಂದಿದ್ದಾರೆ.
ಇತ್ತೀಚೆಗೆ ಪರಿಣಿತಿ ಅವರು ಸಡಿಲವಾದ ಬಟ್ಟೆಗಳನ್ನು ಧರಿಸಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು, ಇದು ಪರಿಣಿತಿ ಗರ್ಭಿಣಿ ಎಂಬ ವದಂತಿ ಹರಡಲು ಪ್ರಾರಂಭವಾಗಿದೆ. ಪಾಪರಾಜಿಗಳು ಪರಿಣಿತಿಯ ಚಿತ್ರಗಳನ್ನು ಸೆರೆಹಿಡಿದಿದ್ದಾರೆ, ಅಲ್ಲಿ ಅವರು ಬಿಳಿ ಶಾರ್ಟ್ಸ್, ದೊಡ್ಡದಾಗಿರುವ ಬಿಳಿ ಶರ್ಟ್ ಧರಿಸಿದ್ದಾರೆ. ಪರಿಣಿತಿಗೆ ಗರ್ಭಿಣಿಯಾಗಿರುವ ಸಾಧ್ಯತೆ ಇದೆ. ಪರಿಣಿತಿ ತೂಕ ಹೆಚ್ಚಾಗಿದ್ದು, ಮದುವೆಯ ನಂತರ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಕೆಲವು ಮೂಲಗಳು ಹೇಳುತ್ತಿವೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪರಿಣಿತಿ ಫ್ಯಾನ್ಸ್, ಪರಿಣಿತಿ ಗರ್ಭಿಣಿಯಂತೆ ಕಾಣಿಸುತ್ತಾರೆ, ಪಕ್ಕಾ ಹೆಣ್ಣು ಮಗು ಆಗುತ್ತದೆ, ಪರಿಣಿತಿ ಗರ್ಭಿಣಿಯಾಗಿದ್ದಾಳೆಂದು ನಾನು ಭಾವಿಸುತ್ತೇನೆ, ಒಳ್ಳೆಯ ಸುದ್ದಿಯು ದಾರಿಯಲ್ಲಿದೆ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.ಆದರೆ ಈ ಕುರಿತಾಗಿ ನಟಿ ಪರಿಣಿಸಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಆಗಲಿ ಯಾವುದೇ ಮಾಹಿತಿ ನೀಡಿಲ್ಲ.
ಸೆಪ್ಟೆಂಬರ್ 24ರಂದು ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಪರಿಣಿತಿ ಮತ್ತು ರಾಘವ್ ಅವರ ವಿವಾಹ ಅದ್ಧೂರಿಯಾಗಿ ನೆರವೇರಿತ್ತು. ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಪರಿಣಿತಿ ಮತ್ತು ರಾಘವ್ ಕುಟುಂಬಸ್ಥರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.