

ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮದುವೆ ಸಂಭ್ರಮ ಪ್ರಾರಂಭವಾಗಿದ್ದು, ಉದಯಪುರದ ಹೋಟೆಲ್ ಲೀಲಾ ಮತ್ತು ತಾಜ್ ಲೇಕ್ ಪ್ಯಾಲೇಸ್‌ನಲ್ಲಿ ವಿವಾಹ ಶಾಸ್ತ್ರ ಸಂಪ್ರದಾಯಗಳು ನಡೆದಿವೆ. ಮದುವೆಯ ನಂತರ ನವಜೋಡಿಯು ಆರತಕ್ಷತೆಯಲ್ಲಿ ಪೋಸ್ ನೀಡಿರುವ ಫೋಟೋವೊಂದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಪರಿಣೀತಿ ಚೋಪ್ರಾ ಗುಲಾಬಿ ಬಣ್ಣದ ಸೀರೆಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ರೆ ರಾಘವ್ ಚಡ್ಡಾ ಕಪ್ಪ ಬಣ್ಣದ ಸೂಟ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಮದುವೆಯಾದ ದಂಪತಿ, ಮದುವೆಯ ನವೋತ್ಸಾಹದಲ್ಲಿದ್ದಾರೆ. ಹಣೆಗೆ ಕುಂಕುಮ ಮತ್ತು ಕೈಯಲ್ಲಿ ಗುಲಾಬಿ ಬಣ್ಣದ ಬಳೆಗಳ ಮತ್ತೂ ಪರಿಣೀತಿ ಧರಿಸಿದ ಸೀರೆಯನ್ನು ಆರ್ಗನ್ಜಾ ಕೇಪ್ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಬೇಬಿ ಪಿಂಕ್ ಸೀರೆಗೆ ಮ್ಯಾಚ್ ಆಗುವ ರೀತಿಯಲ್ಲಿ ನೆಕ್ಲೇಸ್ ಅನ್ನು ಮದುವೆ ನಂತರದ ಆರತಕ್ಷತೆಯಲ್ಲಿ ಪರಿಣೀತಿ ಹಾಕಿಕೊಂಡಿದ್ದಾರೆ.
ಮತ್ತೊಂದೆಡೆ ರಾಘವ್ ಚಡ್ಡಾ ಕಪ್ಪು ಬಣ್ಣದ ಸೂಟ್‌ನಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದಾರೆ. ವೈಟ್ ಶರ್ಟ್ ಧರಿಸಿದ್ದ ರಾಘವ್, ಅದಕ್ಕೆ ಕ್ಲಾಸಿ ಲುಕ್ ನೀಡುವ ಸಲುವಾಗಿ ಕಪ್ಪು ಬಣ್ಣದ ಕೋಟ್ ಧರಿಸಿದ್ದಾರೆ. ಕಪ್ಪು ಬಣ್ಣದ ಬ್ಲೇಜರ್, ಟೈ ಮತ್ತು ಪ್ಯಾಂಟನ್ನೂ ಧರಿಸಿದ್ದರು.
ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ವಿವಾಹದಲ್ಲಿ ಹಲವಾರು ಸೆಲೆಬ್ರಿಟಿಗಳು ಮತ್ತು ಹೆಸರಾಂತ ವ್ಯಕ್ತಿಗಳು ಭಾಗವಹಿಸಿದ್ದರು. ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್, ಹರ್ಭಜನ್ ಸಿಂಗ್, ಸಾನಿಯಾ ಮಿರ್ಜಾ ಮತ್ತು ಮನೀಶ್ ಮಲ್ಹೋತ್ರಾ ವಿವಾಹ ಮಹೋತ್ಸವದಲ್ಲಿ ಉದಯಪುರಕ್ಕೆ ಭೇಟಿ ಕೊಟ್ಟಿದ್ದಾರೆ.
ಪರಿಣೀತಿ ಸೋದರಿ, ಪ್ರಿಯಾಂಕಾ ಚೋಪ್ರಾ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದರೆ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಕಾರ್ಯಕ್ರಮಗಳಿಗೆ ಹಾಜರಿದ್ದರು. ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಂನಲ್ಲಿ ಪರಿಣೀತಿಗೆ ಶುಭ ಹಾರೈಸಿದ್ದಾರೆ.