ಪಾಲಕರೇ, ಮಕ್ಕಳಿಗೆ ಸಂಸ್ಕಾರ ಕಲಿಸಿ

bgs
ಭದ್ರಾವತಿ ತಾಲೂಕು ಶಾಂತಿ ನಗರ ಬಿಜಿಎಸ್ ಕುವೆಂಪು ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವದಲ್ಲಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ಸಾಯಿನಾಥ ಸ್ವಾಮೀಜಿ, ಎಂ.ರಮೇಶ್ ಶೆಟ್ಟಿ, ಎ.ಕೆ.ನಾಗೇಂದ್ರಪ್ಪ, ಗದೀಶ್ ಹಂಚಿನಾಳ ಭಾಗವಹಿಸಿದ್ದರು.
Published on

ಶಿವಮೊಗ್ಗ: ತಂದೆ, ತಾಯಿಗಳು ಮಕ್ಕಳಿಗಾಗಿ ಆಸ್ತಿ ಮಾಡುವುದರ ಕಡೆ ಯೋಚಿಸದೆ, ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿ ಮಾಡುವುದರತ್ತ ಗಮನಹರಿಸಬೇಕು ಎಂದು ಆದಿಚುಂಚನಗಿರಿ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.

ಭದ್ರಾವತಿ ತಾಲೂಕು ಶಾಂತಿ ನಗರದಲ್ಲಿ ಬಿಜಿಎಸ್ ಕುವೆಂಪು ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಶಾಲೆಯಲ್ಲಿ ಮಕ್ಕಳು ಕೇವಲ 6 ತಾಸು ಇರುತ್ತಾರೆ. ಮನೆಯಲ್ಲಿರುವ ಅವಧಿಯ ಹೆಚ್ಚು. ಹೀಗಾಗಿ ಮನೆಯಲ್ಲಿ ಮಕ್ಕಳನ್ನು ಸರಿಯಾಗಿ ಬೆಳೆಸುವ ಹೊಣೆ ಪಾಲಕರದು ಎಂದು ತಿಳಿಸಿದರು.

ಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳು ಭಾಗವಹಿಸುವಂತೆ ಶಿಕ್ಷಕರು ನೋಡಿಕೊಳ್ಳುತ್ತಾರೆ. ಮನೆಯಲ್ಲಿ ಮಗುವಿಗೆ ಸೂಕ್ತ ಸಂಸ್ಕಾರ ನೀಡುವಂತಾಗಬೇಕು. ಮಕ್ಕಳ ಎದುರಲ್ಲಿ ಪಾಲಕರು ಉದಾತ್ತ ಜೀವನ ನಡೆಸಬೇಕು. ಅದು ಮಕ್ಕಳಿಗೆ ಪ್ರೇರಣೆಯಾಗಬೇಕು. ಟಿವಿ, ಮೊಬೈಲ್‌ಗಳಿಂದ ಮಕ್ಕಳನ್ನು ದೂರ ಇಡಬೇಕು ಎಂದು ತಿಳಿಸಿದರು.

ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ, ಭದ್ರಾವತಿ ಬಿಇಒ ಎ.ಕೆ.ನಾಗೇಂದ್ರಪ್ಪ, ಭದ್ರಾವತಿ ಗ್ರಾಮಾಂತರ ವಲಯ ಪೋಲಿಸ್ ಇನ್ಸ್‌ಪೆಕ್ಟರ್ ಜಗದೀಶ್ ಹಂಚಿನಾಳ, ದೀನಬಂಧು ಟ್ರಸ್ಟ್ ಅಧ್ಯಕ್ಷ ಎಂ.ರಮೇಶ್ ಶೆಟ್ಟಿ, ಟ್ರಸ್ಟಿ ವಾಸಪ್ಪ ಗೌಡ, ಪ್ರಾಚಾರ್ಯ ಅಶೋಕ್ ಇದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net