ಮಕ್ಕಳ ಆಸಕ್ತಿ ಗುರುತಿಸಿ ಪಾಲಕರು ಪ್ರೋತ್ಸಾಹಿಸಿ

5KMD-1
ಮೆಣಸಗೆರೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಮತ್ತು ಜ್ಞಾನ ಮುದ್ರಾ ವಿದ್ಯಾ ಮಂದಿರದ ಆವರಣದಲ್ಲಿ ಆಯೋಜಿಸಿದ್ದ ಚಿಕ್ಕರಸಿನಕೆರೆ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ರಾಷ್ಟ್ರ ಮಟ್ಟದ ಈಜು ಕ್ರೀಡಾಪಟು ಡಾ.ಉತ್ತರ ಸುರೇಶ್ ಉದ್ಘಾಟಿಸಿದರು. ಶಿವಮ್ಮ ಶಿವಕುಮಾರ್, ತೇಜಸ್ವಿನಿ ತಿಪ್ಪೂರೇಗೌಡ, ಪ್ರಭಾ ಸುರೇಶ್, ಬೋರೇಗೌಡ, ಪಾರ್ವತಮ್ಮ, ರಮೇಶ್ ಇದ್ದರು.
Published on

ಕೆ.ಎಂ.ದೊಡ್ಡಿ: ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲೇ ತೊಡಗಿಸಿಕೊಳ್ಳಲು ಪಾಲಕರು ಪ್ರೋತ್ಸಹಿಸಬೇಕು ಎಂದು ರಾಷ್ಟ್ರ ಮಟ್ಟದ ಈಜು ಕ್ರೀಡಾಪಟು ಡಾ.ಉತ್ತರ ಸುರೇಶ್ ಕಿವಿಮಾತು ಹೇಳಿದರು.

ಸಮೀಪದ ಮೆಣಸಗೆರೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಜ್ಞಾನ ಮುದ್ರಾ ವಿದ್ಯಾ ಮಂದಿರದ ಆವರಣದಲ್ಲಿ ಆಯೋಜಿಸಿದ್ದ ಚಿಕ್ಕರಸಿನಕೆರೆ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಹಳ್ಳಿಯೊಂದರಲ್ಲಿ ಹುಟ್ಟಿದ ನಾನು ಮೂರು ವರ್ಷದವಳಾಗಿದ್ದಾಗಲೇ ಈಜಿನಲ್ಲಿ ಆಶಕ್ತಿ ಇದ್ದುದ್ದರಿಂದ ನನ್ನ ತಂದೆ ತಾಯಿ ನನ್ನನ್ನು ಪ್ರೋತ್ಸಾಹಿಸಿದ್ದರಿಂದ ನಾನು ರಾಷ್ಟ್ರ ಮಟ್ಟದ ಈಜು ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯವಾಯಿತು. ಪಾಲಕರು ಪ್ರೋತ್ಸ್ಸಾಹ ನೀಡಿದರೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಧನಂಜಯ್ ಮಾತನಾಡಿ, ಪ್ರತಿಭೆ ಎಲ್ಲ ಮಕ್ಕಳಲ್ಲೂ ಇರುತ್ತದೆ. ಅದನ್ನು ಗುರುತಿಸಿ ಹೊರತರುವುದು ಪಾಲಕರು ಹಾಗೂ ಶಿಕ್ಷಕರ ಕರ್ತವ್ಯ ಎಂದರು.

ಸಂಸ್ಥೆಯ ಕಾರ್ಯದರ್ಶಿ ಶಿವಮ್ಮ ಶಿವಕುಮಾರ್, ಟ್ರಸ್ಟಿ ತೇಜಸ್ವಿನಿ ತಿಪ್ಪೂರೇಗೌಡ, ಪ್ರಭಾ ಸುರೇಶ್, ವಿಶ್ರಾಂತ ಪ್ರಾಧ್ಯಾಪಕ ಬಿ.ಎಸ್ ಬೋರೇಗೌಡ, ಗ್ರಾಮ ಪಂಚಾಯಿತಿ ಅದ್ಯಕ್ಷೆ ಪಾರ್ವತಮ್ಮ, ಶಿಕ್ಷಣ ಸಂಯೋಜಕ ರಮೇಶ್, ಸಮೂಹ ಸಂಪನ್ಮೂಲ ವ್ಯಕ್ತಿ ನಂದೀಶ್, ಬೋರಯ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳೂ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net