ಮಗಳನ್ನೇ 27 ವರ್ಷಗಳಿಂದ ಗೃಹ ಬಂಧನದಲ್ಲಿಟ್ಟ ಹೆತ್ತವರು! ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದೇಗೆ?

Bbau (15)
Published on

ಪೋಲೆಂಡ್‌: ಸುಮಾರು ಮೂರು ದಶಕಗಳಿಂದ(27 ವರ್ಷ) ನಾಪತ್ತೆಯಾಗಿದ್ದ ಮಹಿಳೆಯೊಬ್ಬಳು ಇದೀಗ ಜೀವಂತವಾಗಿ ಪತ್ತೆಯಾಗಿದ ಆಘಾತಕಾರಿ ಘಟನೆ ಪೋಲೆಂಡ್‌ನಲ್ಲಿ ಇತ್ತೀಚಿಗೆ ಬೆಳಕಿಗೆ ಬಂದಿದೆ.

ಹೌದು, ಮಿರೆಲ್ಲಾ ಎಂದು ಗುರುತಿಸಲ್ಪಟ್ಟ ಮಹಿಳೆ 1998ರಲ್ಲಿ 15ನೇ ವಯಸ್ಸಿನಲ್ಲಿ ಸಾರ್ವಜನಿಕ ಜೀವನದಿಂದ ಕಣ್ಮರೆಯಾಗಿದ್ದರು. ನೆರೆಹೊರೆಯವರು ಅವಳು ಕಾಣೆಯಾಗಿದ್ದಾಳೆ ಎಂಬ ಆಕೆಯ ಪೋಷಕರ ಹೇಳಿಕೆಯನ್ನು ಕಳೆದ 27 ವರ್ಷಗಳದಿಂದ ನಂಬಿದ್ದರು. ಆದರೆ, ಇನ್ನು ಶಾಕಿಂಗ್​ ವಿಷಯ ಏನೆಂದರೆ ಆಕೆಯ ಪಾಲಕರೇ ಆಕೆಯ ಸ್ವಂತ ಮಲಗುವ ಕೋಣೆಯೊಳಗೆ ಬೀಗ ಹಾಕಿದ್ದರು ಎಂದು ವರದಿ ಉಲ್ಲೇಖಿಸಿದೆ.

ಪ್ರಕರಣ ಬೆಳಕಿಗೆ ಬಂದಿದ್ದೇಗೆ?

ಇದೇ ವರ್ಷದ ಆರಂಭದಲ್ಲಿ(2025) ಜುಲೈನಲ್ಲಿ ಅಪಾರ್ಟ್ಮೆಂಟ್​​ನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಫ್ಲಾಟ್ ಅನ್ನು ಪ್ರವೇಶಿಸಿದಾಗ ಸತ್ಯ ಬೆಳಕಿಗೆ ಬಂದಿದೆ.

ಅಪಾರ್ಟ್ಮೆಂಟ್​​ನಲ್ಲಿರುವ ಕುಟುಂಬಗಳ ನಡುವೆ ಗಲಭೆಯಾದಾಗ ಕಟ್ಟಡದ ಎಲ್ಲಾ ಮನೆಗಳ ಸರ್ಚ್​​ ನಡೆದಾಗ ಈ ಪ್ರಕರಣ ಹೊರ ಬಿದಿದ್ದೆ. ಅಂದು ಪೊಲೀಸರು ಗಮನಿಸಿ ತನಿಖೆ ನಡೆಸಿದಾಗ ಆಕೆ ಮಿರೆಲ್ಲಾ ಎಂದು ಗೊತ್ತಾಗಿದೆ. ಈಗ 42 ವರ್ಷ ವಯಸ್ಸಿನ ಮಿರೆಲ್ಲಾ ಒಂದು ಸಣ್ಣ ಕತ್ತಲೆಯ ಕೋಣೆಯಲ್ಲಿ, ದುರ್ಬಲವಾಗಿ ಮತ್ತು ಇನ್ನೇನೂ ಜೀವಕ್ಕೆ ಹೋಗುವ ಸ್ಥಿತಿಯಲ್ಲಿ ಇರುವುದನ್ನು ಪೊಲೀಸರು ಕಂಡುಕೊಂಡರು. ಕೂಡಲೇ ಅವಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸೋಂಕಿನಿಂದ ಅವಳು "ಸಾವಿಗೆ ಕೆಲವೇ ದಿನಗಳ ದೂರದಲ್ಲಿದೆ" ಎಂದು ವೈದ್ಯರು ದೃಢಪಡಿಸಿದರು.

ಮಿರೆಲ್ಲಾಳ ಪತ್ತೆ ಜುಲೈನಲ್ಲಿ ನಡೆದಿದ್ದರೂ, ಆಕೆಯ ನೆರೆಹೊರೆಯವರು ಆಕೆಯ ಚೇತರಿಕೆಗೆ ಸಹಾಯ ಮಾಡಲು ನಿಧಿ ಸಂಗ್ರಹಣೆಯನ್ನು ಪ್ರಾರಂಭಿಸಿದ ನಂತರವೇ ಪ್ರಕರಣ ಜಗತ್ತಿಗೆ ತಿಳಿದಿದೆ. ಇನ್ನು ನಿಧಿ ಸಂಗ್ರಹದ ಸಂಘಟಕರೊಬ್ಬರು "ಸೋಂಕಿನಿಂದಾಗಿ ಅವರು ಸಾಯಲು ಕೇವಲ ಕೆಲವು ದಿನಗಳ ದೂರದಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅವರ ಸ್ಥಿತಿ ಇದೀಗ ಗಂಭೀರವಾಗಿರುವುದರಿಂದ ಅವರು ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದಾರೆ" ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​​ ಮಾಡಿದ್ದಾರೆ.

ತನ್ನ ಪಾಲಕರೇ ಗೃಹಬಂಧನಲ್ಲಿರಿಸಿದ್ದರೆ?

ಮಿರೆಲ್ಲಾಳನ್ನು ತಿಳಿದಿದ್ದ ಜನರು ಅವಳು ಸುಮಾರು 30 ವರ್ಷಗಳ ಹಿಂದೆ ತನ್ನ ಕುಟುಂಬದ ಮನೆಯನ್ನು ತೊರೆದಿದ್ದಾಳೆಂದು ಭಾವಿಸಿದ್ದರು. ದುರದೃಷ್ಟವಶಾತ್, ಸತ್ಯವು ವಿಭಿನ್ನವಾಯಿತು. ಇನ್ನೂ ಹೆಚ್ಚಿನ ವಿಷಯಗಳು ತಿಳಿದಿಲ್ಲ. ಆಕೆಯನ್ನು ತನ್ನ ಪಾಲಕರೇ ಏಕೆ ಬಂಧಿಸಿದ್ದರು ಎಂದು ಕೂಡ ತಿಳಿಯದು. ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net