ಮಗುವಿನ ಸೂಕ್ಮತೆಯನ್ನು ಅರಿತು ಒಳ್ಳೆಯ ಪುಸ್ತಕಗಳನ್ನು ನೀಡಿ; ನಾಮದೇವ

14-RNR-07
Published on

ರಾಣೆಬೆನ್ನೂರ: ಸಾಹಿತ್ಯವೆಂಬ ಸಂಪತ್ತು ಮಕ್ಕಳ ಮನಸ್ಸು ಮತ್ತು ಬುದ್ಧಿಯನ್ನು ವಿಕಾಸಗೊಳಿಸುತ್ತದೆ. ಶುದ್ಧ, ಪ್ರಾಮಾಣಿಕ ಬದುಕಿನತ್ತ ಸಾಗಿಸುತ್ತದೆ. ಭಾಷೆಯನ್ನು ಕಲಿಸುವ ಜತೆಗೆ ಬದುಕುವ ವಿವೇಕವನ್ನು ಜಾಗೃತಗೊಳಿಸುತ್ತದೆ ಎಂದು ಚಿತ್ರಕಲಾವಿದ ನಾಮದೇವ ಕಾಗದಗಾರ ಹೇಳಿದರು.
ನಗರದಲ್ಲಿ ಕಾಗದ ಸಾಂಗತ್ಯ ವೇದಿಕೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪದ್ಯ ಓದು- ಮಕ್ಕಳ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನ ನಾವು ನೀವು ಕನ್ನಡವನ್ನಷ್ಟನ್ನೇ ಕೊಲ್ಲುತ್ತಿಲ್ಲ, ಕನ್ನಡ ಸಾಹಿತ್ಯವನ್ನೂ ದೂರ ಮಾಡುತ್ತಿದ್ದೇವೆ. ಕನ್ನಡದಲ್ಲಿ ಸಮೃದ್ಧವಾಗಿ ಸೃಷ್ಟಿಯಾಗುತ್ತಿರುವ ಟಿವಿ, ಮೊಬೈಲ್​ಗಳಂತಹ ನವ ಮಾಧ್ಯಮದ ಎದುರು ಸಾಹಿತ್ಯ ಸೊರಗಿದೆ. ಮಗುವಿನ ಸೂಕ್ಮತೆಯನ್ನು ಅರಿತು ಒಳ್ಳೆಯ ಪುಸ್ತಕಗಳನ್ನು ನೀಡಬೇಕು. ಮಗತನದ ಮನಸ್ಸುಗಳು ಈ ನಿಟ್ಟಿನಲ್ಲಿ ಕ್ರೀಯಾಶೀಲರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಹಾಗೂ ಉಪನ್ಯಾಸಕ ಡಾ. ಎಂ.ಈ. ಶಿವಕುಮಾರ ಹೊನ್ನಾಳಿ ಮಾತನಾಡಿ, ಮಕ್ಕಳನ್ನು ಓದಿನೊಂದಿಗೆ ಸಾಹಿತ್ಯ, ಸಂಗೀತ, ಕಲೆ ಮತ್ತಿತರ ವಿಷಯಗಳಲ್ಲಿ ತೊಡಗಿಸುವುದರಿಂದ ಅವರ ಮನಸ್ಸು ಆರಳುವ ಜತೆಗೆ ಸೃಜನಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೇರೆಪಿಸುತ್ತದೆ ಎಂದರು.
ಮಕ್ಕಳು ನಾಡಿನ ಹಿರಿಯ ಕವಿಗಳಾದ ಕುವೆಂಪು, ಬೇಂದ್ರೆ, ಕಾರಂತರವರು ರಚಿಸಿದ ಕವಿತೆಗಳನ್ನು ಓದಿದರು.
ಕವಿಗಳಾದ ದ್ರಾಕ್ಷಾಯಣಿ ಉದಗಟ್ಟಿ, ರಮೇಶ ಬಡಿಗೇರ, ಸವಿತಾ ಮಲ್ಲಾಡದ, ಸುಮಾ ಮಲ್ಲಾಡದ, ರೇಖಾ ರಾಮಾಳದ, ಪ್ರಣವ ಎನ್​.ಕೆ. ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net