VIDEO | 'ನಾಳೆ ಬಗ್ಗೆ ಯೋಚನೆಯೇ ಇರಲಿಲ್ಲ'; ಭಾವುಕರಾದ 'ಪಾಪ ಪಾಂಡು' ಚಿದಾನಂದ!

ವಿಜಯವಾಣಿ - 2024-01-07T202358.765
Published on

ಬೆಂಗಳೂರು: ಕನ್ನಡ ಕಿರುತೆರೆ ಲೋಕದಲ್ಲಿ ಜನರನ್ನು ಹೊಟ್ಟೆಹುಣ್ಣಾಗುವಂತೆ ನಕ್ಕುನಗಿಸಿದ ಕಾಮಿಡಿ ಸೀರಿಯಲ್ ಅಂದರೆ ಅದು ‘ಪಾಪ ಪಾಂಡು’. ಈ ಸೀರಿಯಲ್​ನ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಪಾಂಡು ಅಲಿಯಾಸ್​ ಚಿದಾನಂದ ಹಾಗೂ ಅವರ ಪತ್ನಿ ಇತ್ತೀಚೆಗೆ ವಿಜಯವಾಣಿ ತಂಡ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ, ತಮ್ಮ ಜೀವನದ ಹಲವು ಸಂಗತಿಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

'ಪಾಪ ಪಾಂಡು' ಕಾಮಿಡಿ ಸೀರಿಯಲ್​ಗೆ ಚಾನ್ಸ್​ ಸಿಕ್ಕಿದ್ದೇಗೆ? ಮದುವೆಗೂ ಮುನ್ನ ಇದ್ದ ಪರಿಸ್ಥಿತಿಯನ್ನು ನೆನೆದ ನಟ ಚಿದಾನಂದ, "ನಾನು ಯಾವತ್ತು ನಾಳೆಯ ಬಗ್ಗೆ ಯೋಚನೆ ಮಾಡೇ ಇರಲಿಲ್ಲ. ಇವತ್ತಿಗೂ ಅಷ್ಟೇ ನಾಳಿನ ಚಿಂತೆ ಮಾಡೋದು ಇಲ್ಲ. ಆದ್ರೆ, ಈಗ ಮಕ್ಕಳಿರುವ ಕಾರಣಕ್ಕೆ ಮುಂದಿನ ದಿನಗಳು ಹೇಗೆ? ಏನು? ಎಂದು ಯೋಚನೆ ಮಾಡ್ತೀನಿ" ಎಂದರು.

"ನಮ್ಮದೊಂದು ಅವಿಭಕ್ತ ಕುಟುಂಬ, ನನಗೆ ದುಡಿಯಬೇಕು, ಹಣ ಸಂಪಾದಿಸಬೇಕು ಅಂತ ಇರಲಿಲ್ಲ. ಇದ್ದಿದ್ದು ಇಷ್ಟೇ! ಏನಾದರೂ ಸಾಧಿಸಬೇಕು, ಅದು ನಾಟಕವೇ ಇರಲಿ, ಸಿನಿಮಾನೇ ಆಗಿರಲಿ ಎಂದು. ಮದುವೆಯಾದ ಬಳಿಕ ಒಂದು ಸೀರಿಯಲ್​ ಮಾಡಿದೆ. ಅದರ ಹೆಸರು 'ಕಣ್ಣಾಮುಚ್ಚಾಲೆ'. ಅದರಲ್ಲಿ......." ಮತ್ತಷ್ಟು ವಿಚಾರಗಳನ್ನು ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ವೀಕ್ಷಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net