ಪಣೋಲಿಬೈಲಿನಲ್ಲಿ ವಾರ್ಷಿಕ ಕೋಲ

Panolibail Kalkuda Kallurti Kola
Published on

ಬಂಟ್ವಾಳ: ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಕುಡ- ಕಲ್ಲುರ್ಟಿ ದೈವಸ್ಥಾನದ ವಾರ್ಷಿಕ ಕೋಲ ಬುಧವಾರ ರಾತ್ರಿ ನೆರವೇರಿತು.

ಬೆಳಗ್ಗೆ ಸಜಿಪ ಮಾಗಣೆಯ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ದ್ವಾದಶ ನಾರಿಕೇಳ ಗಣಹೋಮ, ಕಲಶಾಭಿಷೇಕ, ಪರ್ವಸೇವೆ, ನಾಗದೇವರಿಗೆ ಫಲಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ ಮೊದಲಾದ ವಿಧಾನಗಳು ನಡೆದವು. ಆಡಳಿತಾಧಿಕಾರಿ, ತಹಸೀಲ್ದಾರ್ ರಶ್ಮಿ ಎಸ್.ಆರ್, ಕಾರ್ಯನಿರ್ವಹಣಾಧಿಕಾರಿ ಜಯಮ್ಮ, ತಾಲೂಕು ಕಚೇರಿ ಸ್ಥಾನೀಯ ಉಪತಹಸೀಲ್ದಾರ್ ಅಣ್ಣು ನಾಯ್ಕ, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ನವೀನ್ ಬೆಂಜನಪದವು, ಗ್ರಾಮಲೆಕ್ಕಾಧಿಕಾರಿ ಸ್ವಾತಿ, ದೇವಸ್ಥಾನ ಅರ್ಚಕ ವರ್ಗ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net