

ನಾಗ್ಪುರ್: 20 ರೂಪಾಯಿ ಬಿಲ್ ವಿಚಾರದಲ್ಲಿ ಜಗಳವಾಡಿದ ವ್ಯಕ್ತಿಯೊಬ್ಬ ಪಾನಿಪುರಿ ಮಾರಾಟಗಾರನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ ಎಂದು ನಾಗ್ಪುರ ಪೊಲೀಸರು ಭಾನುವಾರ ಮಾಹಿತಿ ನೀಡಿದ್ದಾರೆ.
ವ್ಯಾಪಾರಿಯ ಸ್ಟಾಲ್‌ಗೆ ಸಮೀಪವಿರುವ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ 20 ರೂಪಾಯಿ ಬಾಕಿ ಬಿಲ್ ಪಾವತಿಸುವಂತೆ ಪಾನಿಪುರಿ ಅಂಗಡಿ ಮಾಲೀಕ ಹೇಳಿದ್ದಾರೆ. ಅಷ್ಟಕ್ಕೇ ಸಿಟ್ಟಾದ ಈ ವ್ಯಕ್ತಿ, ಅಂಗಡಿ ಮಾಲೀಕನ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾನೆ.
ಇಪ್ಪತ್ತು ರೂಪಾಯಿಯ ಕ್ಷುಲ್ಲಕ ವಿಚಾರ ಜಗಳಕ್ಕೆ ಕಾರಣವಾಗಿದ್ದು ಮಾರಾಟಗಾರ ಜೈರಾಮ್ ಗುಪ್ತಾ ಹೊಟ್ಟೆಗೆ ಆರೋಪಿ ಇರಿದಿದ್ದಾನೆ. ತಕ್ಷಣ ಸುತ್ತಮುತ್ತಲಿನವರು ಗಾಯಗೊಂಡಿದ್ದ ವ್ಯಾಪಾರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು ಆತನ ವಿರುದ್ಧ ಕೊಲೆ ಯತ್ನದ ಆರೋಪ ಹೊರಿಸಲಾಗಿದೆ ಎಂದು ಜಾರಿಪಟ್ಕ ಪೊಲೀಸ್ ಠಾಣೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)