ಜೋ ಬಿಡೆನ್​ ಅಧಿಕಾರಕ್ಕೆ ಬರುತ್ತಿದ್ದಂತೆ ಟಾಯ್ಲೆಟ್​ ಪೇಪರ್​ಗೂ ಬಂತು ಬರ! ಕೊಳ್ಳಲು ಮುಗಿಬಿದ್ದ ಜನ

toilet paper
Published on

ವಾಷಿಂಗ್ಟನ್​: ಭಾರತದಲ್ಲಿ ಕರೊನಾ ಸೋಂಕಿನ ಹಾವಳಿ ಕಡಿಮೆಯಾಗುತ್ತಿದೆಯಾದರೂ ಬೇರೆ ದೇಶಗಳಲ್ಲಿ ಸೋಂಕಿನ ಪ್ರಮಾಣ ತಗ್ಗಿಲ್ಲ. ಅಮೆರಿಕದಲ್ಲಂತೂ ಸೋಂಕು ಶರವೇಗದಲ್ಲಿ ಹಬ್ಬಲಾರಂಭಿಸಿದೆ. ಸೋಂಕಿನ ತೀವ್ರತೆ ಕಾಣುತ್ತಿರುವ ಅಮೆರಿಕದಲ್ಲಿ ಇದೀಗ ಟಾಯ್ಲೆಟ್​ ಪೇಪರ್​ಗೂ ಬರ ಬಂದಿದೆ.

ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. 22 ರಾಜ್ಯಗಳು ಮತ್ತೊಮ್ಮೆ ಲಾಕ್​ಡೌನ್​ ಘೋಷಿಸಿವೆ. ಅಗತ್ಯ ಸೇವೆಯ ಅಂಗಡಿಗಳು ಹೊರೆತಾಗಿ ಬೇರೆಲ್ಲ ಅಂಗಡಿಗಳು ಬಾಗಿಲು ಮುಚ್ಚಿವೆ. ಅನೇಕ ಕಾರ್ಖಾನೆಗಳೂ ಬಾಗಿಲು ಮುಚ್ಚಿರುವುದರಿಂದಾಗಿ ಅಂಗಡಿಗಳಿಗೆ ಸರಕು ಪೂರೈಕೆಯಾಗುತ್ತಿಲ್ಲ. ಟಾಯ್ಲೆಟ್​ ಪೇಪರ್​, ಸೋಪು, ಪೇಪರ್​ ಟವಲ್​, ಕ್ಲೀನಿಂಗ್​ ವೈಪ್ಸ್​, ಕೈಗವಚ ಸೇರಿ ಅನೇಕ ವಸ್ತುಗಳು ಅಂಗಡಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಅದೇ ಹಿನ್ನೆಲೆಯಲ್ಲಿ ಅನೇಕ ಮಾರ್ಕೆಟ್​ಗಳು ಮತ್ತು ಅಂಗಡಿಯಲ್ಲಿ ಇಂತಹ ಸರಕು ಖಾಲಿಯಾಗಲಾರಂಭಿಸಿದೆ.

ಮರು ಲಾಕ್​ಡೌನ್​ ಆರಂಭವಾದ ಹಿನ್ನೆಲೆಯಲ್ಲಿ ಜನರು ಅಗತ್ಯ ಸರಕಿನ ಖರೀದಿಗೆ ಮುಗಿ ಬಿದ್ದಿದ್ದಾರೆ. ಕ್ಯಾಲಿಫೋರ್ನಿಯಾ ಸೇರಿ ಅನೇಕ ನಗರಗಳಲ್ಲಿ ಈ ಸಮಸ್ಯೆ ಉಂಟಾಗಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net