

ಪನೀರ್ನಿಂದ ಮಾಡುವ ಅಡುಗೆಗಳೆಂದರೆ ಮಕ್ಕಳಿಗೂ ತುಂಬಾ ಇಷ್ಟ. ಮನೆಯಲ್ಲಿಯೇ ಸುಲಭದಲ್ಲಿ ತಯಾರಿಸ ಬಹುದಾದ ಕೆಲ ಪನೀರ್ ರೆಸಿಪಿ ಇಲ್ಲಿದೆ.
ಮಾಡುವ ವಿಧಾನ : ಮೆಂತ್ಯ ಸೊಪ್ಪನ್ನು ಚಾಕುವಿನಿಂದ ಕತ್ತರಿಸಬೇಡಿ, ಚಾಕುವಿನಿಂದ ಕತ್ತರಿಸಿದರೆ ಮೆಂತ್ಯ ಸೊಪ್ಪಿನ ಕಹಿ ಪಲ್ಯಕ್ಕೆ ಬರುವ ಸಾಧ್ಯತೆಯಿದೆ. ಅದರ ಬದಲು ಒಂದೊಂದೇ ಎಲೆಯನ್ನು ಕೈಯಿಂದ ಬೇರ್ಪಡಿಸಿ. ಬಾಣಲೆಗೆ ಎಣ್ಣೆ ಹಾಕಿ ಒಗ್ಗರಣೆಗೆ ಸಾಸಿವೆ, ಜೀರಿಗೆ, ಇಂಗಿನ ಪುಡಿ, ಕರಿಬೇವಿನ ಸೊಪ್ಪು ಹಾಕಿ. ಸಣ್ಣಗೆ ತುಂಡರಿಸಿದ ಆಲೂಗಡ್ಡೆ ತುಂಡುಗಳನ್ನು ಹಾಕಿ ಸ್ವಲ್ಪವೇ ನೀರಲ್ಲಿ ಬೇಯಿಸಿರಿ. ಅರ್ಧ ಬೆಂದ ನಂತರ ಬಟಾಣಿ ಹಾಕಿ ಬೇಯಿಸಿರಿ. ಕೊನೆಗೆ ಮೆಂತ್ಯ ಸೊಪ್ಪನ್ನು ಸೇರಿಸಿ, ಬೆಂದ ನಂತರ ಉಪ್ಪು, ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಾಲ ಹಾಕಿ ಚೆನ್ನಾಗಿ ಮಿಶ್ರಣವಾದ ಮೇಲೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಸುಪ್ರೀತಾ ವೆಂಕಟ್ ಬೆಂಗಳೂರು