ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮದಿನ ಆಚರಣೆ; ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

Published on

ಬೆಂಗಳೂರು:
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ರಾಜಕೀಯ ಮುಖಂಡರಷ್ಟೆ ಅಲ್ಲ, ಮಹಾನ್ ಮೇಧಾವಿ ಮತ್ತು ಅರ್ಥ ಶಾಸಜ್ಞ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ 108ನೇ ಜನ್ಮದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಉಚಿತ ಸೂಪರ್ ಸ್ಪೆಷಾಲಿಟಿ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಹೆಮ್ಮೆಯ ಸುಪುತ್ರರಲ್ಲಿ ದೀನ್ ದಯಾಳ್ ಕೂಡ ಒಬ್ಬರು. ಈ ದೇಶದ ಯುವಜನತೆಗೆ ಮಾದರಿಯಾಗಿ ತಮ್ಮ ಜೀವನ ಸವೆಸಿದ ಮಹಾನ್ ವ್ಯಕ್ತಿ. ಇಂದಿನ ಯುವಪೀಳಿಗೆಗೆ ಅವರು ಆದರ್ಶ ಪುರುಷರಾಗಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಸೆ.17ರಿಂದ 15 ದಿನಗಳ ಕಾಲ ಸೇವಾ ಪಾಕ್ಷಿಕ ನಡೆಯುತ್ತಿದೆ. ವಿವಿಧ ಮೋರ್ಚಾಗಳೂ ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿವೆ ಎಂದರು.
ಮೋದಿ ಅವರ ನಾಯಕತ್ವವನ್ನು ಜಗತ್ತೇ ಮೆಚ್ಚಿಕೊಂಡಿದೆ. ಸೇವಾ ಪಾಕ್ಷಿಕದ ಮೂಲಕ ಅವರ ಸಾಧನೆಯನ್ನು ಜನರಿಗೆ ತಿಳಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ, ಸಂಸದ ಡಾ.ಸಿ.ಎನ್.ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ಸಿ.ಟಿ.ರವಿ, ಎನ್.ರವಿಕುಮಾರ್, ಡಾ. ಧನಂಜಯ್ ಸರ್ಜಿ, ಭಾರತಿ ಶೆಟ್ಟಿ, ವೈ.ಎ.ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ರಾಜ್ಯದ ಮಾಜಿ ಕಾರ್ಯದರ್ಶಿ ಜಗದೀಶ ಹಿರೇಮನವಿ, ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ, ಕಿದ್ವಾಯಿ ನಿವೃತ್ತ ನಿರ್ದೇಶಕರಾದ ಡಾ. ವಿಜಯಲಕ್ಷ್ಮೀ ದೇಶಮಾನೆ, ಆರ್.ವಿ. ಮೆಟ್ರೋಪೆಲಿಸ್ ಮುಖ್ಯಸ್ಥ ಡಾ. ರವಿಕುಮಾರ್, ಹೃದಯ ತಜ್ಞ ಡಾ. ಆರ್.ಕೇಶವ್, ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ನಾರಾಯಣ, ಸಹ ಸಂಚಾಲಕ ಡಾ.ಸದಾನಂದ ಎಸ್.ಎಂ, ರಾಜ್ಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net