ಕಾಲಮಿತಿಯೊಳಗೆ ಪಂಚಾಯತ್ ಪ್ರಗತಿ ಸೂಚ್ಯಂಕ ಪ್ರಕ್ರಿಯೆ ಪೂರ್ಣಕ್ಕೆ ಸಿಇಒ ಸೂಚನೆ

CTD zp----0005
Published on

ಚಿತ್ರದುರ್ಗ: ಸಾಮಾಜಿಕ-ಆರ್ಥಿಕ ಸೂಚಕಗಳನ್ನು ಬಳಸಿಕೊಂಡು ಗ್ರಾಪಂಗಳ ಸಮಗ್ರ ಅಭಿವೃದ್ಧಿ, ಕಾರ್ಯಕ್ಷಮತೆ ಪ್ರಗತಿ ನಿರ್ಣಯಿಸಲು ನೆರವಾಗುವ ಪಂಚಾಯತ್ ಪ್ರಗತಿ ಸೂಚ್ಯಂಕ(ಅಐ 2.0)ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಹೇಳಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಪಂ.ಪ್ರಗತಿ ಸೂಚ್ಯಂಕ ಪ್ರಕ್ರಿಯೆ ಕುರಿತು ಜಿಲ್ಲಾ ಹಂತದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಪಂ.ಪ್ರಗತಿ ಸೂಚ್ಯಂಕ ಪ್ರಕ್ರಿಯೆಯನ್ನು ನಿಗಿದಿತ ಕಾಲಮಿತಿಯೊಳಗೆ ಸರಿಯಾದ ದತ್ತಾಂಶಗಳನ್ನು ಸಂಗ್ರಹಿಸಿ ಅಐ 2.0 ತಂತ್ರಾಂಶದಲ್ಲಿ ಅಳವಡಿಸಿ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರದ ಮಾರ್ಗಸೂಚಿಗಳ ಅನ್ವಯ ಕಟ್ಟುನಿಟ್ಟಾಗಿ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ಸಿ.ಎಸ್. ಗಾಯತ್ರಿ ಮಾತನಾಡಿ, ಸಾಕ್ಷ್ಯಾಧಾರಿತ ಯೋಜನೆಗಾಗಿ(ಉಜಿಛ್ಞ್ಚಿಛಿ ಆಛಿ ಟ್ಝಚ್ಞ್ಞಜ್ಞಿಜ)ಪಂ ಸೂಚ್ಯಂಕದ ಪ್ರಾಮುಖ್ಯತೆಯನ್ನು ಮತ್ತು ಅಐ 2.0ರ ಪ್ರಮುಖ ಅಂಶಗಳು ಮತ್ತು ಪ್ರಕ್ರಿಯಲ್ಲಿನ ವಿವಿಧ ಹಂತಗಳ ಕುರಿತು ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ-2025 ಅಭಿಯಾನದ ಕುರಿತು ಮಾಹಿತಿ ನೀಡಿದರು.

ಜಿಪಂ ಯೋಜನಾ ವ್ಯವಸ್ಥಾಪಕ(ಇ-ಆಡಳಿತ)ಎಚ್. ಶಶಿಧರ್ ಮಾತನಾಡಿ, ಅಐ 2.0ರ ಮತ್ತು ತಾಲೂಕುವಾರು ಸ್ಕೋರ್ ಕಾರ್ಡ್ ವರದಿ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಡಿಡಿಪಿಐ ಎಂ.ಆರ್. ಮಂಜುನಾಥ್, ವಿವಿಧ ಇಲಾಖೆ ಅಧಿಕಾರಿಗಳಾದ ಚಂದ್ರ ಕುಮಾರ್, ಸಿ.ಎಸ್.ದೇವರಾಜ್, ರಂಜಿತಾ, ಡಾ.ಬಿ.ವಿ.ಗಿರೀಶ್, ಡಾ.ಎನ್. ಕಾಶಿ, ನಿರ್ಮಲಾ, ವೀಣಾ, ಜಾಫರ್, ಎಸ್. ನಾಗಭೂಷಣ್, ರಾಮಕೃಷ್ಣ, ಶಾಜೀದಾ, ಯತೀಶ್‌ಕುಮಾರ್, ರೂಪಾಕುಮಾರಿ, ಸಂಪತ್‌ಕುಮಾರ್, ಯಶ್ವಂತ್, ರಾಜೇಶ್ವರಿ, ನಿರಂಜನಮೂರ್ತಿ, ಕರಿಯಪ್ಪ, ಸಣ್ಣರಾಜಣ್ಣ, ಡಿ. ರಾಘವೇಂದ್ರ, ಕೆ.ಬಿ. ಸುರೇಶ್, ಮಂಜುನಾಥ್ ಇತರರು ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net