ಪಂಚರತ್ನ ರಥಯಾತ್ರೆ ವೇಳೆ ಕೆ.ಆರ್.ಪೇಟೆಯಲ್ಲಿ ಸ್ಟೀಲ್​ ಬಿಂದಿಗೆಗಾಗಿ ಮುಗಿಬಿದ್ದ ನಾರಿಯರು!

mandya
Published on

ಮಂಡ್ಯ: ಪಂಚರತ್ನ ರಥಯಾತ್ರೆ ವೇಳೆ ಸ್ಟೀಲ್ ಬಿಂದಿಗಾಗಿ ನಾರಿಯರು ಮುಗಿಬಿದ್ದ ಘಟನೆ ಕೆ.ಆರ್. ಪೇಟೆಯಲ್ಲಿ ಸಂಭವಿಸಿದೆ. ಟ್ರ್ಯಾಕ್ಟರ್​ನಲ್ಲಿ ಹೊಸ ಸ್ಟೀಲ್ ಬಿಂದಿಗೆಗಳನ್ನು ತುಂಬಿಕೊಂಡು ಬಂದ ಜೆಡಿಎಸ್​ ಮುಖಂಡರು, ಮಹಿಳೆಯರಿಗೆ ಹಂಚುತ್ತಿದ್ದರು. ಈ ವೇಳೆ ನಾ ಮುಂದು, ತಾ ಮುಂದು ಎಂಬಂತೆ ಮುಗಿಬಿದ್ದರು. ಒಂದೊಂದೇ ವಿತರಿಸಲು ಸಾಧ್ಯವಾಗದೇ ಮಹಿಳೆಯರತ್ತ ಬಿಂದಿಗೆಗಳನ್ನು ಎಸೆಯುತ್ತಿದ್ದ ದೃಶ್ಯ ವೈರಲ್​ ಆಗಿದೆ.

ಕೆ.ಆರ್.ಪೇಟೆ ಕ್ಷೇತ್ರದಲ್ಲಿ ನಿನ್ನೆ(ಭಾನುವಾರ) ಪಂಚರತ್ನ ರಥಯಾತ್ರೆ ನಡೆಯಿತು. ಈ ವೇಳೆ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರನ್ನ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಗಿತ್ತು. ಜೆಡಿಎಸ್‌ ಅಭ್ಯರ್ಥಿ ಮಂಜು ಅವರು ಪೂರ್ಣಕುಂಭ ಸ್ವಾಗತಕ್ಕಾಗಿ 5 ಸಾವಿರ ಬಿಂದಿಗೆಗಳನ್ನು ತರಿಸಿದ್ದರು. ಆದರೆ 1 ಸಾವಿರ ಮಂದಿ ಪೂರ್ಣಕುಂಭ ಸಿದ್ಧತೆ ಮಾಡಲಾಗಿತ್ತು. ಈ ವೇಳೆ ಉಳಿದ ಬಿಂದಿಗೆಗಳನ್ನು ಜನರಿಗೆ ವಿತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net