ಪಂಚಾಮೃತ, ತೈಲಾಭಿಷೇಕ ನಾಳೆ

purushottam
ಪುರುಷೋತ್ತಮ್
Published on

ಶಿವಮೊಗ್ಗ: ವಿನೋಬನಗರದ 60 ಅಡಿ ರಸ್ತೆಯ ರಕ್ತೇಶ್ವರಿ ಮತ್ತು ಮಳಲಿ ಗಿಡ್ಡಮ್ಮ ಸೇವಾ ಸಮಿತಿಯಿಂದ ಶಿವರಾತ್ರಿ ಪ್ರಯುಕ್ತ ಫೆ.26ರಂದು ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ತಿಳಿಸಿದರು.

ಸುಮಾರು 100 ವರ್ಷಗಳಿಂದ ಸಣ್ಣ ಗುಡಿಯಲ್ಲಿದ್ದ ರಕ್ತೇಶ್ವರಿ ಮತ್ತು ಮಳಲಿ ಗಿಡ್ಡಮ್ಮ ದೇವರಿಗೆ 2006ರಲ್ಲಿ ದೇವಸ್ಥಾನ ನಿರ್ಮಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. 26ರ ಬೆಳಗ್ಗೆ 9.30ರಿಂದ ಪಂಚಾಮೃತ ಅಭಿಷೇಕ, ತೈಲಾಭಿಷೇಕ ಹಾಗೂ ಶಿವಲಿಂಗಕ್ಕೆ ಭಕ್ತರಿಂದ ಕ್ಷೀರಾಭಿಷೇಕ ನಡೆಯಲಿದೆ. ಸಂಜೆ 7ರಿಂದ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸಮಿತಿ ಅಧ್ಯಕ್ಷ ಭೀಮಣ್ಣ, ಉಪಾಧ್ಯಕ್ಷ ದಯಾನಂದ್, ಪ್ರಮುಖರಾದ ಧನಂಜಯ, ಶರತ್ ಚಂದ್ರ, ದೀಪಕ್ ಸಿಂಗ್, ಕಿರಣ್, ಮುರಳಿ, ಸುದೀಶ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net