Panchamirtham Controversial Statement: ದೇವಸ್ಥಾನದ ಪಂಚಾಮೃತದಲ್ಲಿ ಮಕ್ಕಳಾಗದಂತೆ ಮಾತ್ರೆ ಹಾಕ್ತಾರೆ ! ಡೈರೆಕ್ಟರ್​ ಅರೆಸ್ಟ್ ಆಗ್ತಿದ್ದಂತೆ ಬೆಲ್​

Mohan G
Published on

ಮುಂಬೈ: ತಮಿಳು ನಿರ್ದೇಶಕ ಮೋಹನ್​​ ಜಿ ( Mohan G)  ಪಳನಿ ದೇವಸ್ಥಾನದ ಪವಿತ್ರ ಪಂಚಾಮೃತಂ (panchamirtham ) ಕುರಿತು ವಿವಾದಾತ್ಮಕ (Controversial Statement) ಹೇಳಿಕೆ ನೀಡಿ ಅರೆಸ್ಟ್​​ ಆಗಿದ್ದ ಬೆನ್ನಲ್ಲೇ ಜಾಮೀನು ಪಡೆದಿದ್ದಾರೆ ಎನ್ನಲಾಗಿದೆ.

ಮೋಹನ್​ ಅವರ ಖಾಸಗಿ ಯೂಟ್ಯೂಬ್​ ಚಾನೆಲ್​​ವೊಂದಕ್ಕೆ ಸಂದರ್ಶನ ನೀಡಿದ್ದರು. ನಿರ್ದೇಶಕ ಮೋಹನ್ ಅವರು ಪಳನಿ ದೇವಸ್ಥಾನದಲ್ಲಿ ಭಕ್ತರಿಗೆ ನೀಡಲಾಗುವ ಪಂಚಾಮೃತದಲ್ಲಿ ಮಕ್ಕಳಾಗದಂತೆ ದುರ್ಬಲ ಮಾತ್ರೆ ಬಳಸುತ್ತಾರೆ. ಅಲ್ಲಿ ಕೆಲಸ ಮಾಡುವವರೇ ನನಗೆ ಗೊತ್ತಿರುವವರೇ ಇದನ್ನು ನನಗೆ ಹೇಳಿದ್ದರು.

ಎಂದಿದ್ದರು ಎಂದು ಹೇಳಿಕೆ ನೀಡಿದ್ದರು. ಇದನ್ನು ಗಮನಿಸಿ ಅವರ ಮೇಲೆ ದೂರು ದಾಖಲಾಗಿದೆ. ಈ ಹಿನ್ನೆಲೆ ನಿರ್ದೇಶಕನನ್ನು ಅರೆಸ್ಟ್​ ಮಾಡಲಾಗಿದೆ. ತಿರುಪತಿ ಲಡ್ಡುವಿನಲ್ಲಿ ದನ, ಹಂದಿ ಮತ್ತು ಮೀನಿನ ಎಣ್ಣೆ ಬಳಕೆ ಆರೋಪ ಕೇಳಿ ಬಂದ ಹಿನ್ನೆಲೆ ಡೈರೆಕ್ಟರ್​ ಕೊಟ್ಟ ಈ ಹೇಳಿಕೆಯು ವೈರಲ್​ ಆಗಿದೆ.

ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆಗಳಿವೆ ಎಂದು ಸಮಯಪುರಂ ಮಾರಿಯಮ್ಮನ್​ ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯವಸ್ಥಾಪಕ ಕವಿ ಅರಸು ಆರೋಪಿಸಿದ್ದರು. ಈ ಕುರಿತು ದೂರು ಕೂಡ ನೀಡಿದ್ದರು.

ಪಳನಿ ದೇವಸ್ಥಾನದ ಪವಿತ್ರ ಪಂಚಾಮೃತಂ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಸಿನಿಮಾ ನಿರ್ದೇಶಕ ಮೋಹನ್​ ಜಿ ಅವರನ್ನು ಪೊಲೀಸರು ಬಂಧಿಸಿದ್ದರು. ತಿರುಚ್ಚಿಯ ಸೈಬರ್​ ಕ್ರೈಂ ಪೊಲೀಸರು ನಿರ್ದೇಶಕನನ್ನು ಚೆನ್ನೈನ ಮನೆಯಲ್ಲಿದ್ದಾಗ ಅರೆಸ್ಟ್​ ಮಾಡಿದ್ದರು.

ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರವೇ ಬಂಧನದಲ್ಲಿ ತಿರುಚ್ಚಿ ಪೊಲೀಸರು ವಾರಂಟ್ ಇದ್ದರೂ ಪೊಲೀಸರು ಸರಿಯಾದ ಬಂಧನ ಕಾರ್ಯವಿಧಾನಗಳನ್ನು ಅನುಸರಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಧೀಶರು ಟೀಕಿಸಿದರು. ಕೊನೆಗೆ ಮೋಹನ್ ಜಿ ಅವರನ್ನು ಅವರ ಸ್ವಂತ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.

ಈ ಬಂಧನವು ವ್ಯಾಪಕವಾದ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದೆ, ಅನೇಕ ಜನರು ಪರಿಸ್ಥಿತಿಗೆ ಪೊಲೀಸರ ವಿಧಾನವನ್ನು ಟೀಕಿಸಿದ್ದಾರೆ. ಬಂಧನದ ನಿರ್ವಹಣೆಯು ಅಸಮ್ಮತಿಯನ್ನು ಎದುರಿಸಿದೆ, ಇದು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳ ಅಲೆಗೆ ಕಾರಣವಾಗುತ್ತದೆ ಮತ್ತು ಈ ಪ್ರಕರಣದಲ್ಲಿ ಕಾನೂನು ಜಾರಿ ಕಾರ್ಯವಿಧಾನಗಳ ಪರಿಶೀಲನೆಗಾಗಿ ವಿವಿಧ ಸಾರ್ವಜನಿಕ ವ್ಯಕ್ತಿಗಳಿಂದ ಕರೆಗಳು ಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net