ಹರಿಹರ ವೀರಶೈವ ಪಂಚಮಸಾಲಿ ಪೀಠದ ಶ್ರೀಗಳಿಂದ ಇಷ್ಟಲಿಂಗ ಪೂಜೆ

11-RNR-05
Published on

ರಾಣೆಬೆನ್ನೂರ: ದೇವರು ಒಬ್ಬನೇ ಎಂಬ ಭಾವನೆಯಿಂದ ಲಿಂಗ ಪೂಜೆ ಮಾಡಬೇಕು. ದೇವರು ಸಹ ಭಕ್ತರ ಭಾವಕ್ಕೆ ಒಲಿಯುತ್ತಾನೆ ಎಂದು ಹರಿಹರ ವೀರಶೈವ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಹೇಳಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ನಗರದ ದೊಡ್ಡಪೇಟೆಯ ಪಂಚಾಚಾರ್ಯ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಇಷ್ಟಲಿಂಗ ಪೂಜಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಮಠಗಳು ಭಕ್ತರಿಗೆ ಧಾರ್ಮಿಕ ವಿಧಿ ವಿಧಾನಗಳ ಆಚರಣೆ ಕುರಿತು ಬೋಧನೆ ಮಾಡುತ್ತವೆ. ಹಿಂದೆ ನಾಡಿ ಮಿಡಿತ ಮೂಲಕ ಆರೋಗ್ಯ ತಪಾಸಣೆ ಮಾಡಲಾಗುತ್ತಿತ್ತು. ಅದು ಶ್ರೇಷ್ಠವಾದ ವಿಜ್ಞಾನವಾಗಿದ್ದು ಮಂತ್ರಗಳ ಪಠಣೆಯಿಂದ ರೋಗವಾಸಿಯಾಗುತ್ತದೆ. ಮಂತ್ರಗಳಲ್ಲಿ ಅಷ್ಟೊಂದು ಶಕ್ತಿಯಿದೆ ಎಂದರು.
ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ವಸಂತಾ ಹುಲ್ಲತ್ತಿ, ತಾಲೂಕು ಘಟಕದ ಅಧ್ಯಕ್ಷೆ ಗೀತಾ ಕಾಕೋಳ, ಭಾರತಿ ಜಂಬಗಿ, ಗೀತಾ ಜಂಬಗಿ, ಎಸ್.ಎಸ್. ರಾಮಲಿಂಗಣ್ಣನವರ, ಸಿದ್ದಣ್ಣ ಚಿಕ್ಕಬಿದರಿ, ಶಿವಪ್ಪ ಗುರಿಕಾರ, ನಾಗರತ್ನಾ ಗುಡಿಹಳ್ಳಿ, ನಾಗರಾಜ ಮೋಟಗಿ, ಪ್ರಭಾವತಿ ತಿಳವಳ್ಳಿ, ಅಖಿಲಾ ಮಹಾಂತಶೆಟ್ರ, ರಾಜಣ್ಣ ಪಾಟೀಲ, ರಾಜಣ್ಣ ಮೋಟಗಿ, ಮೃತ್ಯುಂಜಯ ಪಾಟೀಲ, ದಯಾನಂದ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net