

ನವದೆಹಲಿ: ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ನೀಡಿದ್ದ ಗಡುವು ವಿಸ್ತರಣೆಯಾಗಿದೆ. ಪ್ಯಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ಜೂ.30ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ನೀಡಲಾಗಿದ್ದ ಅವಧಿ ಮುಕ್ತಾಯವಾಗುವ ಎರಡು ದಿನಗಳ ಮುಂಚಿತವಾಗಿ ಕೇಂದ್ರ ಸರ್ಕಾರ ಹೊಸ ಆದೇಶ ರವಾನಿಸಿದೆ.
ಮಾರ್ಚ್ 31ರ ಒಳಗಾಗಿ ಆಧಾರ್ ಸಂಖ್ಯೆಗೆ ಪ್ಯಾನ್ ಸಂಖ್ಯೆ ಜೋಡಣೆ ಮಾಡದಿದ್ದರೆ ಅಂತಹ ಪ್ಯಾನ್ ಸಂಖ್ಯೆ ಏಪ್ರಿಲ್ 1ರಿಂದ ನಿಷ್ಕ್ರೀಯಗೊಳ್ಳಲಿದೆ. ಇದನ್ನು ಸಕ್ರೀಯಗೊಳಿಸಬೇಕಾದರೆ 10 ಸಾವಿರ ರೂ. ದಂಡ ಪಾವತಿಸಬೇಕು ಎಂದು ಈ ಹಿಂದಿನ ಆದೇಶದಲ್ಲಿ ಸೂಚನೆ ನೀಡಲಾಗಿತ್ತು.
ಇನ್ನೂ ಸಾಕಷ್ಟು ಜನರು ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ. ಹೀಗಾಗಿ ಈ ನಿರ್ಧಾರ ಮಾಡಲಾಗಿದೆ. ಆಧಾರ್‌ನೊಂದಿಗೆ ಲಿಂಕ್ ಮಾಡದ ಪ್ಯಾನ್ ಕಾರ್ಡ್‌ಗಳು ಜುಲೈ 1 ರಿಂದ ನಿಷ್ಕ್ರಿಯಗೊಳ್ಳುತ್ತವೆ ಎಂದು ಮಂಗಳವಾರ ಹೊರಡಿಸಲಾದ ಆದೇಶದಲ್ಲಿ ಸೂಚಿಸಲಾಗಿದೆ.