ಪಲಿಮಾರು ಕಾಲೇಜಿಗೆ ಶೇ.100

re
Published on

ಪಡುಬಿದ್ರಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಲಿಮಾರು ಸರ್ಕಾರಿ ಪ.ಪೂ. ಕಾಲೇಜು ಶೇ.100 ಫಲಿತಾಂಶ ದಾಖಲಿಸಿದೆ. ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 17 ವಿದ್ಯಾರ್ಥಿಗಳಲ್ಲಿ 4 ಮಂದಿ ವಿಶಿಷ್ಟ, 10 ಪ್ರಥಮ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅನನ್ಯಾ (570), ಆಯಿಷತುಲ್ ಷಫಾ(567), ಭವ್ಯಾ ಪೂಜಾರ್ತಿ(542) ಹಾಗೂ ಕೃಷ್ಣವೇಣಿ ಕರಿಯಪ್ಪ ಕರಿಗಾರ (535) ಸಾಧನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net