ರಾತ್ರಿಯಿಡೀ ಕಷ್ಟಪಟ್ಟು ಎಟಿಎಂ ಮುರಿದ ಕಳ್ಳರು: ಕೊನೆಗೆ ಪೆಚ್ಚು ಮೋರೆ ಹಾಕಿಕೊಂಡು ಹೋದ್ರು..

ATM
Published on

ಪಾಲ್ಘರ್: ಎಟಿಎಂ ಮುರಿದು ಹಣ ಸಿಗದ ಹಿನ್ನೆಲೆಯಲ್ಲಿ ಕಳ್ಳರು ಬರಿಗೈಯಲ್ಲಿ ಹಿಂದಿರುಗಿದ ಘಟನೆ ಮಹಾರಾಷ್ಟ್ರದ ಪಾಲ್ಘರ್​ ತಾಲೂಕಿನ ಮಸ್ವಾನ್​ ಗ್ರಾಮದಲ್ಲಿ ನಡೆದಿದೆ.

ಶುಕ್ರವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕೆಲವು ದುಷ್ಕರ್ಮಿಗಳು ರಾಷ್ಟ್ರೀಕೃತ ಬ್ಯಾಂಕ್‌ನ ಎಟಿಎಂಗೆ ನುಗ್ಗಿದ್ದು, ಕೊಠಡಿಯೊಳಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಕ್ಕೂ ಹಾನಿ ಮಾಡಿದ್ದಾರೆ. ಆ ಬಳಿಕ ಎಟಿಎಂ ಬಾಕ್ಸ್ ಒಡೆದಿದ್ದಲ್ಲದೆ, ಹಣ ಕದ್ದೊಯ್ಯಲು ಮುಂದಾಗಿದ್ದಾರೆ. ಆದರೆ ಅದೃಷ್ಟವಶಾತ್​, ಎಟಿಎಂನಲ್ಲಿ ನಗದು ಇಲ್ಲದ ಕಾರಣ ಕಳ್ಳರು ಬರಿಗೈಯಲ್ಲಿ ಹಿಂದಿರುಗಿದ್ದಾರೆ.

ಎಟಿಎಂ ಯಂತ್ರವು ಕೆಟ್ಟಿದ್ದು, ಇದರಲ್ಲಿ ಬ್ಯಾಂಕ್​ನ ಸಿಬ್ಬಂದಿ ಯಾವುದೇ ನಗದನ್ನು ಹಾಕಿರಲಿಲ್ಲ. ಇನ್ನು ಬೆಳಿಗ್ಗೆಯಾಗುತ್ತಲೇ ಇದನ್ನು ಗಮನಿಸಿದ ಜನರು ಪೊಲೀಸರಿಗೆ ಮಾಹಿತಿಯನ್ನು ತಲುಪಿಸಿದ್ದು, ಎಟಿಎಂ ದರೋಡೆಗೆ ಯತ್ನಿಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಕ್ಯಾಮರಾ ಜಖಂಗೊಂಡಿರುವ ಕಾರಣ ದುರ್ಷರ್ಮಿಗಳ ಗುರುತು ಇನ್ನು ಪತ್ತೆಯಾಗಿಲ್ಲ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net