ಪಾಕ್​ನ ISI ಬೆಂಬಲಿತ ಗ್ರೆನೇಡ್ ದಾಳಿ ಮಾಡ್ಯೂಲ್ ಪತ್ತೆ: 10 ಜನರ ಬಂಧನ!

dk shivakumar (4)
Published on

ಪಂಜಾಬ್: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಬೆಂಬಲಿತ ಗ್ರೆನೇಡ್ ದಾಳಿ ಮಾಡ್ಯೂಲ್ ಅನ್ನು ಪತ್ತೆಹಚ್ಚಿ 10 ಜನರನ್ನು ಬಂಧಿಸಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಆರೋಪಿಗಳಿಂದ ಪೊಲೀಸ್ ತಂಡಗಳು ಚೀನಾದ ಹ್ಯಾಂಡ್ ಗ್ರೆನೇಡ್ ಅನ್ನು ಸಹ ವಶಪಡಿಸಿಕೊಂಡಿವೆ. ಪಂಜಾಬ್‌ನಲ್ಲಿ ಅಶಾಂತಿ ಸೃಷ್ಟಿಸಲು ಗ್ರೆನೇಡ್ ದಾಳಿ ನಡೆಸಲು ಆರೋಪಿಗಳು ಪಾಕಿಸ್ತಾನ ಮೂಲದ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಲದೀಪ್ ಸಿಂಗ್, ಶೇಖರ್ ಸಿಂಗ್ ಮತ್ತು ಅಜಯ್ ಸಿಂಗ್ ಅಲಿಯಾಸ್ ಅಜಯ್ ಎಂದು ಗುರುತಿಸಲಾದ ಮೂವರು ಆರೋಪಿಗಳು ಶ್ರೀ ಮುಕ್ತಸರ್ ಸಾಹಿಬ್ ನಿವಾಸಿಗಳು ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದು, ತನಿಖೆ ಮಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net