ಸಾರ್ಕ್ ಶೃಂಗ ನಡೆಸೋದಕ್ಕೆ ರೆಡಿ ಎಂದ ಪಾಕ್​: ಒಮ್ಮತವಿಲ್ಲದೇ ಬಿದ್ದು ಹೋಯ್ತು ಪ್ರಸ್ತಾವನೆ

Imran Khan 1 10 March 20
Published on

ಇಸ್ಲಮಾಬಾದ್​: ಸಾರ್ಕ್ ರಾಷ್ಟ್ರಗಳ ಶೃಂಗದ ಆತಿಥ್ಯವಹಿಸುವುದಕ್ಕೆ ಸಿದ್ಧರಿದ್ದೇವೆ ಎಂಬ ಪ್ರಸ್ತಾವನೆಯನ್ನು ಪಾಕಿಸ್ತಾನ ಮುಂದಿಟ್ಟಿತ್ತು. ಆದರೆ, ಒಮ್ಮತ ಮೂಡದ ಕಾರಣ ಅದರ ಪ್ರಸ್ತಾವನೆ ಬಿದ್ದುಹೋಗಿದೆ. ಸಮಯ ಸಂದರ್ಭ ಗಮನಿಸದೇ ಆತಿಥ್ಯದ ಪ್ರಸ್ತಾವನೆ ಮುಂದಿಟ್ಟು ಮುಖಭಂಗಕ್ಕೆ ಒಳಗಾಗಿದೆ ಪಾಕಿಸ್ತಾನ.

ಪ್ರತಿವರ್ಷ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ಅದೇ ಅವಧಿಯಲ್ಲಿ ಸಾರ್ಕ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯೂ ನಡೆಯುತ್ತದೆ. ಕೋವಿಡ್ ಕಾರಣಕ್ಕೆ ಇದೇ ಮೊದಲ ಬಾರಿ ಸಾರ್ಕ್ ರಾಷ್ಟ್ರಗಳ ವಿದೇಶಾಂಗ ಸಚಿವ ಸಭೆ ವರ್ಚುವಲ್ ರೂಪದಲ್ಲಿ ನಡೆಯಿತು. ಇದೇ ವೇಳೆ, ಪಾಕಿಸ್ತಾನ ಶೃಂಗ ಆತಿಥ್ಯವಹಿಸುವ ಪ್ರಸ್ತಾವನೆ ಮುಂದಿಟ್ಟಿದೆ. ಆದರೆ, ಕೋವಿಡ್ ಸೋಂಕಿನ ಕಾರಣ ಎಲ್ಲ ರಾಷ್ಟ್ರಗಳೂ ಅದರ ವಿರುದ್ಧದ ಕಾರ್ಯದಲ್ಲಿ ತೊಡಗಿರುವ ಕಾರಣ ಶೃಂಗ ಏರ್ಪಡಿಸುವುದಕ್ಕೆ ಸರಿಯಾದ ಸಮಯವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದವು.

ಇಸ್ಲಮಾಬಾದ್​ನಲ್ಲಿ 2016ರಲ್ಲಿ ಶೃಂಗ ಆಯೋಜಿತವಾಗಿತ್ತು. ಆದರೆ, ಉರಿ ಉಗ್ರ ದಾಳಿಯ ಕಾರಣ ಭಾರತ ಶೃಂಗದಿಂದ ಹಿಂದೆ ಸರಿದಿತ್ತು. ಇದರ ಬೆನ್ನಿಗೆ ಇತರೆ ರಾಷ್ಟ್ರಗಳೂ ಭಾರತವನ್ನು ಬೆಂಬಲಿಸಿ ಶೃಂಗದಿಂದ ಹಿಂದೆ ಸರಿದಿದ್ದವು. ಅಲ್ಲಿಂದೀಚೆಗೆ ಶೃಂಗ ನಡೆದಿಲ್ಲ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net