

Video Viral: ಪಹಲ್ಗಾಮ್ ದಾಳಿಯ ಪ್ರತಿಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಪಾಕ್ ಉಗ್ರರನ್ನು ಮಟ್ಟಹಾಕಿದೆ. ಭಾರತೀಯ ಸೇನೆಯ ಈ ಕಾರ್ಯಾಚರಣೆಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಇದೀಗ ಪಾಕ್ ಪ್ರಜೆಯೊಬ್ಬ ಆಪರೇಷನ್ ಸಿಂಧೂರ ಪರವಾಗಿ ನಿಂತು ತನ್ನ ನಿಲುವನ್ನು ಹಂಚಿಕೊಂಡ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಹೆಚ್ಚಿನ ಪಾಕಿಸ್ತಾನಿ ಜನಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಪರೇಷನ್ ಸಿಂಧೂರ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇಲ್ಲೊಬ್ಬ ಪಾಕಿಸ್ತಾನಿ ಪ್ರಜೆಯ ವಿಡಿಯೋ ಎಲ್ಲರ ಗಮನ ಸೆಳೆದಿದೆ.
ಅಭಯ್ ವಿಡಿಯೋದಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು 'ನ್ಯಾಯ' ಎಂದು ಕರೆದಿದ್ದಾನೆ, 'ಭಾರತಕ್ಕೆ ಪ್ರತಿದಾಳಿ ಮಾಡುವ ಎಲ್ಲ ಹಕ್ಕಿದೆ'. 'ಭಾರತ ಎಂದಿಗೂ ಅದನ್ನು ಮೊದಲು ಪ್ರಾರಂಭಿಸಲಿಲ್ಲ, ಪಾಕಿಸ್ತಾನದಲ್ಲಿ ಭಯೋತ್ಪಾದಕರನ್ನು ಸಂತಾನೋತ್ಪತ್ತಿ ಮಾಡಲಾಗುತ್ತಿದೆ? ಎಂದು ಆ ವ್ಯಕ್ತಿ ಪಾಕಿಸ್ತಾನವನ್ನು ದೂಷಿಸಿ, ಪ್ರಶ್ನೆ ಮಾಡಿದ್ದಾನೆ. ಜೊತೆಗೆ "ಒಬ್ಬ ಪಾಕಿಸ್ತಾನಿ ಹಿಂದೂವಾಗಿ - ಇದು ನನ್ನ ಅಭಿಪ್ರಾಯ" ಎಂದು ಪೋಸ್ಟ್ನಲ್ಲಿ ಹೇಳಿದ್ದಾನೆ.
ವಿಡಿಯೋ ಇಲ್ಲಿದೆ
ಈ ವಿಡಿಯೋ 'abhayy_s' ಎನ್ನುವ ಇನ್ಸ್ಟಾಗ್ರಾಮ್ನನಿಂದ ಹಂಚಿಕೊಳ್ಳಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ಹೆಚ್ಚಿನ ಭಾರತೀಯರು ಆ ವ್ಯಕ್ತಿಯನ್ನು ಮೆಚ್ಚಿಕೊಂಡಿದ್ದಾರೆ. ಈಗಾಗಲೇ ಈ ವಿಡಿಯೋ 1 ಮಿಲಿಯನ್ ಗಿಂತ ಹೆಚ್ಚು ಜನರು ಲೈಕ್ ಪಡೆದಿದೆ.
ನೆಟ್ಟಿಗರ ಪ್ರತಿಕ್ರಿಯೆ
ಒಬ್ಬ ಬಳಕೆದಾರ "ಯಾರಾದರೂ ಅವನಿಗೆ ಆಧಾರ್ ಕಾರ್ಡ್ ಕೊಡಿ" ಎಂದರೆ, ಮತ್ತೊಬ್ಬ "ಸರಿ ಭಾರತ ಭಯೋತ್ಪಾದಕರ ಮೇಲೆ ದಾಳಿ ಮಾಡುತ್ತದೆ ಆದರೆ ಪಾಕಿಸ್ತಾನ ಅಮಾಯಕ ನಾಗರಿಕರ ಮೇಲೆ ದಾಳಿ ಮಾಡುತ್ತದೆ, ವ್ಯತ್ಯಾಸ ಸ್ಪಷ್ಟವಾಗಿದೆ!!" ಎಂದು ಹೇಳಿದ್ದಾನೆ. ಇನ್ನೊಬ್ಬ ನೆಟ್ಟಿಗ "ಸಹೋದರರು ಆಧಾರ್ ಕಾರ್ಡ್ಗೆ ಅರ್ಹರು" ಎಂದರೆ, ಮತ್ತೊಬ್ಬ "ಭಾರತದ ಪೌರತ್ವ ತೆಗೆದುಕೊಳ್ಳಿ " ಆ ವ್ಯಕ್ತಿಯ ಬಗ್ಗೆ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)